LATEST NEWS
ರಾಮನ ಹೆಸರು ಹೇಳಿದ್ರೆ ಸಾಕಾಗಲ್ಲ, ಆದರ್ಶವೂ ಬೇಕು – ರಮಾನಾಥ ರೈ
ರಾಮನ ಹೆಸರು ಹೇಳಿದ್ರೆ ಸಾಕಾಗಲ್ಲ, ಆದರ್ಶವೂ ಬೇಕು – ರಮಾನಾಥ ರೈ
ಮಂಗಳೂರು ಮಾರ್ಚ್ 7: ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರನ್ನು ನರಹಂತಕನೆಂದು ಕರೆದ ಸಂಸದ ನಳಿನ್ ಹೇಳಿಕೆಗೆ ರೈ ತಿರುಗೇಟು ನೀಡಿದ್ದಾರೆ. ಬಿಜೆಪಿಯವರು ಧೃತಿಗೆಟ್ಟಿದ್ದಾರೆ.ಅದಕ್ಕೆ ಕಾಂಗ್ರೆಸ್ ಮುಕ್ತ ಮಾಡುವ ಮಾತು ಹೇಳುತ್ತಾರೆ ಎಂದು ಅವರು ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಸಂತರಿದ್ದಂತೆ ಎಂದು ಹೇಳಿದರು.
ಯಾವ ಆಧಾರದ ಮೇಲೆ ನರಹಂತಕ ಎನ್ನುತ್ತಾರೆ ? ಇವರ ಜತೆ ಇರುವ ರಾಡಿಕಲ್ಸ್ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಕಿಡಿಕಾರಿದ ಅವರು ಸಂಘ ಪರಿವಾರ ಕೇವಲ ಮುಸ್ಲಿಮರನ್ನು ಮಾತ್ರ ಹತ್ಯೆ ಮಾಡಿಲ್ಲ.ನಾಲ್ಕು ಜನ ಹಿಂದೂಗಳನ್ನು ಕೊಲೆ ಮಾಡಿದವರಲ್ಲಿ ಸಂಘಪರಿವಾರದ ಕೈವಾಡವಿದೆ ಎಂದು ಅವರು ಹೇಳಿದರು.
ಸಂಸದ ನಳಿನ ಕುಮಾರ್ ಕಟೀಲ್ ಜಿಲ್ಲೆಗೆ ಬೆಂಕಿಯಿಡುತ್ತೇನೆ ಎಂದು ಹೇಳಿದವರು. ಎಲ್ಲಿ ಯಾರು ಸಾಯ್ತಾರೆಂದು ಇವರು ಕಾದು ಕುಳಿತಿರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಮನುಷ್ಯನ ಹತ್ಯೆ ಮಾಡಿದವರು ಮನುಷ್ಯರಲ್ಲ ಎಂದು ಅವರು ಹೇಳಿದರು .
ಬೇವರ್ಸಿ ಎಂದರೆ ಏನು ಅರ್ಥಾ? ನಾವು ಅಂತಹ ಭಾಷೆ ಬಳಸಲು ಅಸಂಸ್ಕೃತಿವುಳ್ಳವರಲ್ಲ. ರಾಮನ ಹೆಸರು ಹೇಳಿದ್ರೆ ಸಾಕಾಗಲ್ಲ, ಆದರ್ಶವೂ ಬೇಕು. ಈ ಬಿಜೆಪಿಯವರಲ್ಲಿ ಎಷ್ಟು ಜನರಲ್ಲಿ ರಾಮನ ಆದರ್ಶವಿದೆ ? ಎಂದು ಅವರು ಪ್ರಶ್ನಿಸಿದರು.
You must be logged in to post a comment Login