Connect with us

    LATEST NEWS

    ಸೌದಿ ಅರೇಬಿಯಾ : ಉಮ್ರಾ ಯಾತ್ರೆಯ ಕಾರು ಅಪಘಾತ-ತಂದೆ,ನಾಲ್ವರು ಮಕ್ಕಳು ಮೃತ್ಯು.!

    ಸೌದಿ ಅರೇಬಿಯಾದಲ್ಲಿ(saudi arebia)  ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಸದಸ್ಯರು ದಾರುಣವಾಗಿ ಸಾವನ್ನಪ್ಪಿದ್ದಾರೆ.
    ರಿಯಾದ್ : ಸೌದಿ ಅರೇಬಿಯಾದಲ್ಲಿ(saudi arebia) ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಸದಸ್ಯರು ದಾರುಣವಾಗಿ ಸಾವನ್ನಪ್ಪಿದ್ದಾರೆ.


    ಕುಟುಂಬ ಉಮ್ರಾ ಯಾತ್ರೆ ಮುಗಿಸಿ ಮರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

    ಮಕ್ಕಾ-ರಿಯಾದ್ ರಸ್ತೆಯಲ್ಲಿ ಈ ಭೀಕರ ದುರ್ಘಟನೆ ಸಂಭವಿಸಿದ್ದು ಅಪಘಾತದಲ್ಲಿ ಮೃತಪಟ್ಟ ಕುಟುಂಬ ಜೋರ್ಡನ್ ಮೂಲದಾಗಿದ್ದು ಯುಎಇಯಿಂದ ಉಮ್ರಾಕ್ಕಾಗಿ ಬಂದಿದ್ದರು ಎನ್ನಲಾಗಿದೆ.

    ಮಕ್ಕಳು ಸೇರಿ ಆರು ಸದಸ್ಯರಿದ್ದ ಕುಟುಂಬವು ಉಮ್ರಾ ಮುಗಿಸಿ ಯುಎಇಗೆ ಮರಳುತ್ತಿದ್ದಾಗ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ.

    ತಂದೆ, ತಾಯಿ ಹಾಗೂ ನಾಲ್ವರು ಮಕ್ಕಳು ಕಾರಿನಲ್ಲಿದ್ದು ತಂದೆ ಮಲಿಕ್ ಅಕ್ರಂ, ಮಕ್ಕಳಾದ ಅಕ್ರಂ, ಮಾಯಾ, ದಾನಾ ಮತ್ತು ದೀಮಾ ಸ್ಥಳದಲ್ಲೇ ಮೃತಪಟ್ಟರೆ, ತಾಯಿ ಹೆಚ್ಚಿನ ಗಾಯಗಳಿಲ್ಲದೆ ಪವಾಡ ಸದೃಶ್ಯರಾಗಿ ಪಾರಾಗಿದ್ದಾರೆ.

    ಮೃತರನ್ನು ಹುಫುಫ್ ಪ್ರದೇಶದ ಕಿಂಗ್ ಫಹದ್ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply