Connect with us

    LATEST NEWS

    ಆಟವಾಡುವಾಗ ಕಲ್ಲುಗಳು ಮೈಮೇಲೆ ಬಿದ್ದು 4 ವರ್ಷದ ಮಗು ಮೃತ್ಯು..!

    ಕೆಲಸಕ್ಕೆಂದು ಪೇರಿಸಿಟ್ಟಿದ್ದ ಕಲ್ಲುಗಳು ಮೈಮೇಲೆ ಬಿದ್ದ ಪರಿಣಾಮ ಪುಟ್ಟ ಬಾಲಕಿಯೊಬ್ಬಳು ದಾರುಣವಾಗಿ ಸಾವನ್ನಪ್ಪಿದ್ದ ದಾರುಣ ಘಟನೆ  ಕೇರಳದಲ್ಲಿ ನಡೆದಿದೆ. 

    ಮಲಪ್ಪುರಂ : ಕೆಲಸಕ್ಕೆಂದು ಪೇರಿಸಿಟ್ಟಿದ್ದ ಕಲ್ಲುಗಳು ಮೈಮೇಲೆ ಬಿದ್ದ ಪರಿಣಾಮ ಪುಟ್ಟ ಬಾಲಕಿಯೊಬ್ಬಳು ದಾರುಣವಾಗಿ ಸಾವನ್ನಪ್ಪಿದ್ದ ದಾರುಣ ಘಟನೆ  ಕೇರಳದಲ್ಲಿ ನಡೆದಿದೆ.

    ಕೂನೊಲ್ಮಾಡ್ ಚಮ್ಮಿನಿಪರಂ ನಿವಾಸಿ ಕಂಜಿರಸ್ಸೆರಿ ಪೋಕಟ್ ವಿನೋದ್ ಮತ್ತು ರಮ್ಯಾ ದಂಪತಿಯ 4 ವರ್ಷದ ಪುತ್ರಿ ಗೌರಿ ನಂದಾ ಮೃತ ದುರ್ದೈವಿಯಾಗಿದ್ದಾಳೆ.

    ಮನೆಯ ಸಮೀಪ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಅವಘಡ ಸಂಭವಿಸಿದೆ. ಅಪೂರ್ಣಗೊಂಡ ಮನೆಯಲ್ಲಿ ಮೆಟ್ಟಿಲುಗಳ ರೀತಿಯಲ್ಲಿ ಜೋಡಿಸಲಾದ ಕಲ್ಲಿನ ಮೇಲೆ ಹೆಜ್ಜೆ ಹಾಕಿ ಆಟವಾಡುತ್ತಿದ್ದಾಗ ಹಠತ್ತಾಗಿ ಕಲ್ಲುಗಳು ಮಗುವಿನ ಮೈಮೇಲೆ ಬಿದ್ದಿವೆ.

    ಗಂಭೀರವಾಗಿ ಗಾಯಗೊಂಡ ಮಗುವನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕರಿಯಾಗದೇ ಸಾವನ್ನಪ್ಪಿದ್ದಾಳೆ.

    Share Information
    Advertisement
    Click to comment

    You must be logged in to post a comment Login

    Leave a Reply