Connect with us

    FILM

    ಉಜ್ಜಯಿನಿ ಮಹಾಕಾಳೇಶ್ವರನ ಸನ್ನಿಧಿಯಲ್ಲಿ ಬಾಲಿವುಡ್ ನಟಿ ಸಾರಾ ಅಲಿ ಖಾನ್

    ಉಜ್ಜಯಿನಿ ಜೂನ್ 01: ಬಾಲಿವುಡ್ ನಟ ಸೈಫ್ ಆಲಿ ಖಾನ್ ಅವರ ಮಗಳು ನಟಿ ಸಾರಾ ಅಲಿಖಾನ್ ತನ್ನ ನೂತನ ಸಿನೆಮಾದ ಗೆಲುವಿಗಾಗಿ ಇದೀಗ ಟೆಂಪಲ್ ರನ್ ಪ್ರಾರಂಭಮಾಡಿದ್ದು, ಅವರು ಉಜ್ಜಯಿನಿಯಲ್ಲಿನ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ವಿಕ್ಕಿ ಕೌಶಲ್, ಸಾರಾ ನಟನೆಯ ‘ಝರಾ ಹಟ್ಕೆ ಝರಾ ಬಚ್ಕೆ’ ರಿಲೀಸ್ ಬೆನ್ನಲ್ಲೇ ನಟಿ ದೇವರ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಸೈಫ್ ಪುತ್ರಿ ಸಾರಾ ಅವರು ಆಗಾಗ ಹಿಂದೂ ದೇವಾಲಯಕ್ಕೆ ಭೇಟಿ ನೀಡಿ ಸುದ್ದಿ ಆಗುತ್ತಾರೆ. ಕೆಲವೇ ದಿನಗಳ ಹಿಂದೆ ಅವರು ಕೇದಾರನಾಥಕ್ಕೆ ಹೋಗಿದ್ದರು. ಈಗ ಅವರು ಉಜ್ಜಯಿನಿಯಲ್ಲಿನ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ.

    ಗುಲಾಬಿ ಬಣ್ಣದ ಸಾಂಪ್ರದಾಯಿಕ ಉಡುಗೆ ಧರಿಸಿ ಕಾಣಿಸಿಕೊಂಡ ಅವರು ಅಲ್ಲಿನ ಪುರೋಹಿತರ ಜೊತೆ ಮಾತನಾಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಸಾರಾ, ಹಿಂದೂ ದೇವಸ್ಥಾನಕ್ಕೆ ಭೇಟಿ ನೀಡಿರೋದ್ದಕ್ಕೆ ಕೆಲವರು ತಕರಾರು ತೆಗೆದಿದ್ದಾರೆ. ಇದೆಲ್ಲ ಪ್ರಚಾರದ ಗಿಮಿಕ್ ಎಂದು ವ್ಯಂಗ್ಯವಾಡಿದ್ದಾರೆ. ಸಾರಾ ಅಲಿ ಖಾನ್ ಹಿಂದೂ ಧರ್ಮಕ್ಕೆ ಬಂದ್ರಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply