Connect with us

    FILM

    ಇಸ್ಲಾಂಗೆ ಮತಾಂತರ: ‘ಮಾಹಿರಾ’ ಆದ ಸಂಜನಾ

    ಬೆಂಗಳೂರು: ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿರುವ ಆರೋಪದಡಿ ಬಂಧಿತರಾಗಿರುವ ಸಂಜನಾ ಗಲ್ರಾನಿ ಅಲಿಯಾಸ್ ಅರ್ಚನಾ, 2018ರಲ್ಲೇ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ತಮ್ಮ ಹೆಸರನ್ನು ಮಾಹಿರಾ ಎಂದು ಬದಲಾಯಿಸಿಕೊಂಡಿದ್ದಾರೆ.
    ಈ ಮತಾಂತರ ದೃಢಪಡಿಸಿ ಟ್ಯಾನರಿ ರಸ್ತೆಯ ‘ದಾರುಲ್ ಉಲೂಮ್ ಶಾಹ್ ವಲಿಉಲ್ಲಾ’ ಹೊರಡಿಸಿರುವ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ಸಂಜನಾ ಅವರ ನೈಜ ಹೆಸರು ಅರ್ಚನಾ. ತಂದೆ ಹೆಸರು ಮನೋಹರ್. ವೈದ್ಯರಾಗಿರುವ ಇಸ್ಲಾಂ ಧರ್ಮದ ಯುವಕರೊಬ್ಬರ ಜತೆ ಮದುವೆ ನಿಶ್ಚಯ ಮಾಡಿಕೊಂಡಿರುವ ಅರ್ಚನಾ, ಅದಕ್ಕೂ ಮುನ್ನವೇ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದಾರೆ ಎನ್ನಲಾಗಿದೆ.

    ‘ಹೆಬ್ಬಾಳ ಭುವನೇಶ್ವರಿ ನಗರದ ಅರ್ಚನಾ ಮನೋಹರ್ ಗಲ್ರಾನಿ ಅವರು ಯಾವ ಒತ್ತಡಕ್ಕೂ ಒಳಗಾಗದೇ ಸ್ವಯಂಪ್ರೇರಿತರಾಗಿ ಇಸ್ಲಾಂ ಧರ್ಮಕ್ಕೆ ಸೇರಿದ್ದಾರೆ. ಅವರ ಹೊಸ ಹೆಸರು ಮಾಹಿರಾ’ ಎಂದು ದೃಢೀಕರಣ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
    2018ರ ಅಕ್ಟೋಬರ್ 9ರಂದು ಈ ಪತ್ರವನ್ನು ಸಂಜನಾ ಅವರಿಗೆ ನೀಡಲಾಗಿದೆ. ಪತ್ರವನ್ನೇ ಆಧರಿಸಿ ನ್ಯಾಯಾಲಯಕ್ಕೆ ಸಂಜನಾ ಅಫಿಡ್‌ವಿಟ್ ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply