LATEST NEWS
ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನ..ಪಾರ್ಟಿಯಲ್ಲಿದ್ದ ಆ್ಯಂಕರ್ ಗೆ ಶುರವಾಗಿದೆ ಢವಢವ…..!!
ಮಂಗಳೂರು ಸೆಪ್ಟೆಂಬರ್ 19: ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾದ ನಂಟು ಮಂಗಳೂರಿಗೆ ತಲುಪಿದ್ದು, ಮಂಗಳೂರಿನಲ್ಲಿ ಸಿಸಿಬಿ ಪೊಲೀಸರು ಕಿಶೋರ್ ಶೆಟ್ಟಿ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಮೂಲತಃ ಡ್ಯಾನ್ಸರ್ ಆಗಿರುವ ಕಿಶೋರ್ ಅಮಾನ್ ಶೆಟ್ಟಿ ಹಿಂದಿಯ ಕೆಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾನೆ. ಅಲ್ಲದೆ, ಜನಪ್ರಿಯ ‘ABCD’ ಚಿತ್ರದಲ್ಲೂ ಚಿಕ್ಕ ಪಾತ್ರ ನಿಭಾಯಿಸಿದ್ದಾನೆ. ಮಾದಕ ವಸ್ತು ಮಾರಾಟ ಮಾಡುತ್ತಿದ್ದುದು ಮಾತ್ರವಲ್ಲದೆ ಸ್ವತಃ ಈತಗೂ ಮಾದಕ ವ್ಯಸನಿ ಆಗಿದ್ದ ಎಂಬ ಮಾಹಿತಿ ಕೇಳಿಬಂದಿದೆ. ಈ ಬಗ್ಗೆ ವಿಚಾರಣೆ ಚುರುಕುಗೊಂಡಿದೆ.
ಆದರೆ ತನಿಖೆ ವೇಳೆ ಕಿಶೋರ್ ಶೆಟ್ಟಿ ಕುತೂಹಲಕಾರಿ ಮಾಹಿತಿಗಳನ್ನು ಹೊರಹಾಕಿದ್ದು, ಕನ್ನಡ ಚಿತ್ರರಂಗದ ಕೆಲವು ನಟಿಯರು ಮತ್ತು ನಿರೂಪಕಿಯರ ಜೊತೆಗೂ ಕಿಶೋರ್ ಶೆಟ್ಟಿ ಸಂಪರ್ಕ ಹೊಂದಿದ್ದಾನೆ ಎನ್ನಲಾಗಿದೆ. ಮಂಗಳೂರಿನಲ್ಲಿ ನಡೆದಿರುವ ಪಾರ್ಟಿಯಲ್ಲಿ ಭಾಗಿಯಾಗಿರುವ ಬೆಂಗಳೂರಿನ ನಟಿ ಕಂ ಆ್ಯಂಕರ್ ಬಗ್ಗೆ ತನಿಖಾ ಅಧಿಕಾರಿಗಳು ಕಿಶೋರ್ ಶೆಟ್ಟಿ ಮಾಹಿತಿಯನ್ನು ಕೇಳಿದ್ದು, ಮಂಗಳೂರಿನಲ್ಲಿ ನಡೆದ ಹಲವು ಡ್ರಗ್ಸ್ ಪಾರ್ಟಿಗೆ ಆಕೆ ಬಂದಿದ್ದಳು. ಆದರೆ, ಆಕೆ ಡ್ರಗ್ಸ್ ತೆಗೆದುಕೊಳ್ಳುತ್ತಿರಲಿಲ್ಲ. ಬದಲಿಗೆ ಸಿಕ್ಕಾಪಟ್ಟೆ ಡ್ರಿಂಕ್ಸ್ ಮಾಡುತ್ತಿದ್ದಳು ಅಂತಾ ಮಾಹಿತಿ ನೀಡಿದ್ದಾನಂತೆ. ಆದ್ರೆ ಇದನ್ನು ನಂಬದ ಪೊಲೀಸರು ತಮ್ಮ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈ ವೇಳೆ ಕಿಶೋರ್ ಆ ನಟಿ ಕಂ ನಿರೂಪಕಿ ಕಳೆದ ಹತ್ತು ವರ್ಷಗಳ ಹಿಂದೆ ಬೆಂಗಳೂರಿಗೆ ಹೋಗಿ ಸೆಟಲ್ ಆಗಿದ್ದರು. ಕಳೆದ ಐದಾರು ವರ್ಷಗಳಿಂದ ಸಿನಿಮಾಗಳಲ್ಲಿ ಸಹ ನಟನೆ ಮಾಡಿದ್ದಾರೆ ಎಂದು ಬಾಯಿ ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಇನ್ನು, ಈ ಕಿಶೋರ್ ಅಸಲಿಗೆ ಶೆಟ್ಟಿ ಸಮುದಾಯಕ್ಕೆ ಸೇರಿದ ವ್ಯಕ್ತಿಯೇ ಅಲ್ಲ ಎಂಬ ಸತ್ಯ ಈಗ ಬಯಲಾಗಿದೆ. ಬಾಲಿವುಡ್‌ನಲ್ಲಿ ಅವಕಾಶ ಸಿಗಲಿ ಎಂಬ ಕಾರಣಕ್ಕೆ ತನ್ನ ಹೆಸರಿನ ಜೊತೆ ಶೆಟ್ಟಿ ಎಂಬುದನ್ನು ಸೇರಿಸಿಕೊಂಡು ಎಲ್ಲರನ್ನೂ ಯಾಮಾರಿಸಿದ್ದ ಎಂಬ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ. ಇದು ಶೆಟ್ಟಿ ಸಮುದಾಯದವರು ಆಕ್ರೋಶಕ್ಕೆ ಕಾರಣ ಆಗಿದೆ.
Facebook Comments
You may like
-
ಸಂದರ್ಶನದಲ್ಲಿ ಮಹಿಳಾ ಅಧಿಕಾರಿಗೆ ಖಾಸಗಿ ಅಂಗ ಪ್ರದರ್ಶಿಸಿದ ಐಟಿ ಉದ್ಯೋಗಾಕಾಂಕ್ಷಿ..!
-
ಕುಂದಾಪುರದಲ್ಲಿ ಬೈಕ್ ಕಳ್ಳರಿಗೆ ಸಾರ್ವಜನಿಕರಿಂದ ಬಿತ್ತು ಗೂಸಾ…!
-
ಬಂಗಾರ್ ಪಲ್ಕೆಯ ಜಲಪಾತದ ಗುಡ್ಡ ಕುಸಿದು ಓರ್ವ ಮೃತ್ಯು
-
ಕಡಬ ಹೆದ್ದಾರಿಯಲ್ಲಿ ಭೀಕರ ಅಪಘಾತ; ಒಂದು ಬಲಿ..
-
ಮಹಿಳೆಯನ್ನು ಚುಡಾಯಿಸಿದ ವ್ಯಕ್ತಿಗೆ ಸಾರ್ವಜನಿಕರಿಂದ ಥಳಿತ; ಬಿದ್ದ ಏಟಿಗೆ ಸ್ಥಳದಲ್ಲೆ ಸಾವು
-
ಲಾರಿ ಚಾಲಕನ ಅವಾಂತರ-ಜನಸಾಮಾನ್ಯ ಪ್ರಾಣ ಉಳಿಸಿದ ಕಾಪು ಎಸೈ ರಾಘವೇಂದ್ರ
You must be logged in to post a comment Login