ಕಿರಿಕ್ ಪಾರ್ಟಿ ಸಿನಿಮಾ ಯಶಸ್ಸಿನಲ್ಲಿ ತೇಲುತ್ತಿರುವ ಸಂಯುಕ್ತಾ ಹೆಗ್ಡೆ ತಮ್ಮ ಮುಂದಿನ ಚಿತ್ರಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ.
 ಸಂತೋಷ್ ನಿರ್ದೇಶನದ ಕಾಲೇಜ್ ಕುಮಾರ್ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಸಂಯುಕ್ತಾ ಮೂರನೇ ಪ್ರಾಜೆಕ್ಟ್ ಗೆ ಸಿದ್ಧರಾಗುತ್ತಿದ್ದಾರೆ.
 ಒಮ್ಮೆ ನಿಶ್ಯಬ್ದ ಒಮ್ಮೆ ಯುದ್ದ ಶೀರ್ಷಿಕೆಯ ಸಿನಿಮಾಗೆ ತಮಿಳು ಸಿನಿಮರಂಗದ ತಂತ್ರಜ್ಞರು ಕೆಲಸ ಮಾಡಲಿದ್ದಾರೆ. ಟಾಲಿವುಡ್ ನಲ್ಲಿ ಹೆಸರುವಾಸಿಯಾಗಿ ನಿತ್ಯಾ ಜೊತೆ ಸತ್ಯ ಸಿನಿಮಾ ನಿರ್ದೇಶಿಸಿರುವ ಶ್ರೀನಾಗ್ ಒಮ್ಮೆ ನಿಶಬ್ದ ಒಮ್ಮೆ ಯುದ್ದ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.ತಮ್ಮ ಮುಂದಿನ ಚಿತ್ರದ ಬಗ್ಗೆ ಸಂಯುಕ್ತ ಎಲ್ಲಿಯೂ ಮಾತನಾಡಿಲ್ಲ, ತಮ್ಮ ಪಾತ್ರದ ಬಗ್ಗೆ ಭಾರೀ ನಿರೀಕ್ಷೆ ಇಟ್ಟು ಕೊಂಡಿದ್ದಾರೆ ಎನ್ನಲಾಗಿದೆ, ಇನ್ನೂ ಈ ಸಿನಿಮಾದಲ್ಲಿ ಆಕೆ ಮೂಕಿ ಪಾತ್ರದಲ್ಲಿ ನಟಿಸಲಿದ್ದಾರೆ.

Facebook Comments

comments