Connect with us

    BANTWAL

    ಒಂದೇ ಗ್ರಾಮ ಒಂದೇ ಹೆಸರು ಆದರೆ ಕಂಬಳ ಎರಡು,ಇದು ಬಂಟ್ವಾಳ ವೀರ-ವಿಕ್ರಮ ಜೋಡುಕರೆ ಕಂಬಳ ಕಾಂಟ್ರವರ್ಸಿ..!

    ಬಂಟ್ವಾಳ: ಕಂಬಳ ಇತಿಹಾಸದಲ್ಲಿ ಒಂದೇ ದಿನ ಒಂದೇ ಗ್ರಾಮದಲ್ಲಿ ಒಂದೇ ಹೆಸರಿನಲ್ಲಿ ಎರಡು ಕಂಬಳ ನಡೆಯವ ಬಗ್ಗೆ ಆಮಂತ್ರಣ ಪತ್ರಗಳು ಸಿದ್ದವಾಗಿದ್ದಲ್ಲದೆ,ಕಂಬಳ ನಡೆಯುದಕ್ಕಾಗಿ ಕಂಬಳದ ಕರೆಗಳು ಸಿದ್ದವಾಗಿದ್ದು ಕಂಬಳ ಇತಿಹಾಸದಲ್ಲಿ ಹೊಸ ವಿವಾದ ಸೃಷ್ಟಿಸಿದೆ.

    ಸಂದೀಪ್ ಶೆಟ್ಟಿ ಪೊಡಂಬು ಅವರ ಅಧ್ಯಕ್ಷತೆಯಲ್ಲಿ ಹೊಕ್ಕಾಡಿಗೋಳಿ ಕೊಡಂಗೆ ಎಂಬಲ್ಲಿ ಮಾ.16 ರಂದು ವೀರ-ವಿಕ್ರಮ ಜೋಡುಕರೆ ಕಂಬಳ  ನಡೆಯುವ ಬಗ್ಗೆ ಆಮಂತ್ರಣ ಪತ್ರ ಪ್ರಿಂಟ್ ಆಗಿದೆ. ಕಂಬಳದ ಪ್ರಚಾರದ ಬಗ್ಗೆ ಸಿದ್ದಕಟ್ಟೆ ಸಹಿತ ಅನೇಕ ಕಡೆಗಳಲ್ಲಿ ಬ್ಯಾನರ್ ಕೂಡ ಅಳವಡಿಕೆಯ ಕಾರ್ಯ ಭರದಿಂದ ಸಾಗುತ್ತಿದೆ.ಇನ್ನೂ ಕಂಬಳ ನಡೆಯುವುದಕ್ಕಾಗಿ ಕರೆಯ ಕೆಲಸ ಕಾರ್ಯಗಳು ಬಹುತೇಕ ಪೂರ್ಣಗೊಳ್ಳುತ್ತಿದ್ದು , ಕೆಲವೇ ದಿನಗಳಲ್ಲಿ ನೂತನಾದ ಸುಸಜ್ಜಿತ ಕರೆಯ ನಿರ್ಮಾಣವಾಗಲಿದೆ.
    ರಶ್ಮಿತ್ ಶೆಟ್ಟಿ ಕೈತ್ರೋಡಿ ನೋಣಾಲ್ ಗುತ್ತು ಇವರ ಅಧ್ಯಕ್ಷತೆಯಲ್ಲಿ ಮಹಿಷಮರ್ದಿನಿ ಕಂಬಳ ಸಮಿತಿ ಇವರ ವತಿಯಿಂದ ‌ನಡೆಯುವ ಪೂಂಜ ಶ್ರೀ ಪಂಚದುರ್ಗಾಪರಮೇಶ್ವರಿ ಅಮ್ಮನವರ ಮತ್ತು ಮುಜಲ್ನಾಯ,ಕೊಡಮಣಿತ್ತಾಯ ದೈವದ ನಂಟು ಹೊಂದಿರುವ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ಶ್ರೀ ವೀರ- ವಿಕ್ರಮ ಜೋಡುಕರೆ ಬಯಲು ಕಂಬಳ ಮಾ.16 ರಂದು ನಡೆಯುವ ಬಗ್ಗೆ ಆಮಂತ್ರಣ ಪತ್ರ ಸಿದ್ದವಾಗಿದ್ದು, ಕಂಬಳ ಕರೆಯ ಕಾಮಗಾರಿಗಳು ನಡೆಯುತ್ತಿವೆ.ಹೀಗೆ ಎರಡು ಕಂಬಳಗಳು ಒಂದೇ ದಿನ ನಡೆಯುವ ಬಗ್ಗೆ ಪೂರ್ವ ತಯಾರಿಗಳು ಭರದಿಂದ ಸಾಗುತ್ತಿದೆ.

    ಎರಡು ಕಂಬಳ ನಡೆಯಲು ಅವಕಾಶ ಕೊಡಲ್ಲ: ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಐಕಳ ದೇವಪ್ರಸಾದ್ ಶೆಟ್ಟಿ

    ಹೊಕ್ಕಾಡಿಗೋಳಿ ಎಂಬ ಹೆಸರಿನ ಕಂಬಳಕ್ಕೆ ಜಿಲ್ಲಾ ಕಂಬಳ ಸಮಿತಿ ಪರವಾನಿಗೆ ನೀಡಿದ್ದೇವೆ. ಒಂದೇ ದಿನ ಎರಡು ಕಂಬಳಗಳು ನಡೆಯುವುದಕ್ಕೆ ಸಮಿತಿ ಪರವಾನಿಗೆ ನೀಡಿಲ್ಲ.
    ಆದರೆ ಒಂದೇ ಹೆಸರಿನಲ್ಲಿ ಎರಡು ಕಂಬಳ ಮಾಡಲು ಸಾಧ್ಯವಿಲ್ಲ, ಸಂಘರ್ಷಕ್ಕೆ ಗುರಿಯಾಗುವ ಅವಕಾಶಗಳಿರುವುದರಿಂದ ಒಂದೆ ದಿನ‌ ಎರಡು ಕಂಬಳ ನಡೆಯಲು ಅವಕಾಶ ನೀಡುವುದಿಲ್ಲ, ಬುಧವಾರ ಕಂಬಳ ನಡೆಯಲಿರುವ ಕರೆಗೆ ಆಗಮಿಸುತ್ತೇವೆ. ಸಮಿತಿಯ ಹಿರಿಯರು ಹಾಗೂ ಕಂಬಳದ ಹಿರಿಯರು ಒಟ್ಟಿಗೆ ಸೇರಿ ಮಾತುಕತೆ ನಡೆಸುತ್ತೇವೆ.ಈ ಬಗ್ಗೆ ನಿರ್ಣಯ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.


    ನಿಯಮಗಳಿಗೆ ಅನುಸಾರವಾಗಿ ಕಂಬಳ ನಡೆಯಲಿದೆ : ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ
    ಹೊಕ್ಕಾಡಿಗೋಳಿ ವೀರ- ವಿಕ್ರಮ ಕಂಬಳ ನಡೆಯುತ್ತಿದ್ದ ಜಾಗದಲ್ಲಿ ಜಮೀನು ಸಮಸ್ಯೆಯಾದ ಪರಿಣಾಮ ಈ ಬಾರಿ ಹೊಸತಾಗಿ ಕೊಡಂಗೆ ಎಂಬಲ್ಲಿ ಕರೆ ನಿರ್ಮಾಣವಾಗುತ್ತಿದ್ದು, ಬಹುತೇಕ ಕಾಮಗಾರಿ ಪೂರ್ಣವಾಗುತ್ತಿದ್ದು, 20 ದಿನಗಳಲ್ಲಿ ಕುದಿ ಕಂಬಳ ನಡೆಯಲಿದೆ. ಕಂಬಳ ಇತಿಹಾಸದಲ್ಲಿ ಈ ಹಿಂದೆ ಡಿಸೆಂಬರ್ ತಿಂಗಳಲ್ಲಿ ಹೊಕ್ಕಾಡಿಗೋಳಿ ಕಂಬಳ ನಡೆಯುತ್ತಿತ್ತು.ಈ ಬಾರಿ ಕರೆಯ ಜಾಗದ ಸಮಸ್ಯೆ ಉಂಟಾದ ಪರಿಣಾಮ ಹೊಸ ಕರೆಯ ನಿರ್ಮಾಣದ ಹಿನ್ನೆಲೆಯಲ್ಲಿ ಸ್ವಲ್ಪ ತಡವಾಗಿ ಅಂದರೆ ಮಾ.16 ರಂದು ಕಂಬಳ ನಡೆಯಲಿದೆ.
    ಹೊಕ್ಕಾಡಿಗೋಳಿ ಕಂಬಳ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಕಂಬಳ ಜಿಲ್ಲಾ ಸಮಿತಿಯ ನಿಯಮದಂತೆ ಸಾಂಗವಾಗಿ ಕಂಬಳ ನಡೆಯಲಿದೆ ಎಂದು ಅವರು ತಿಳಿಸಿದರು.
    ಕಂಬಳ ನಡೆಯುವ ಕರೆಯ ಬಗ್ಗೆ ಕಂಬಳ ಸಮಿತಿಯ ನಿಯಮಗಳಿಗೆ ಅನುಸಾರವಾಗಿ ಕರೆಯ ನಿರ್ಮಾಣವಾಗಬೇಕು. ಜಿಲ್ಲಾ ಸಮಿತಿಯ ಎಲ್ಲಾ ನಿಯಮಗಳಿಗೆ ಬದ್ದವಾಗಿರುವ ಸಮಿತಿಗಳಿಗೆ ಜಿಲ್ಲಾ ಸಮಿತಿ ‌ಕಂಬಳ ನಡೆಸಲು ಅವಕಾಶ ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.

    ಜಿಲ್ಲಾ ಕಂಬಳ ಸಮಿತಿ ಎರಡು ಕಂಬಳಗಳು ನಡೆಯಲು ಅವಕಾಶ ನೀಡುವುದಿಲ್ಲ ,ಹಿರಿಯರು ಮಾತುಕತೆ ನಡೆಸುವ ಮೂಲಕ ಸಮಸ್ಯೆ ಬಗೆಹರಿಸುತ್ತೇವೆ ಎಂಬ ಸ್ಪಷ್ಟವಾದ ಮಾತನ್ನು ತಿಳಿಸಿದ್ದಾರೆ .
    ಆದರೆ ಈಗಾಗಲೇ ಎರಡು ಕಂಬಗಳ ನಡೆಯುವುದಕ್ಕೆ ಪೂರ್ವ ತಯಾರಿಗಳು ನಡೆಯುತ್ತಿವೆ.
    ಅಂತಿಮವಾಗಿ ಕಂಬಳ ಸಮಿತಿಯವರ ಮಾತಿನ ಪ್ರಕಾರ ಯಾವುದಾದರೂ ಒಂದು ಕಂಬಳ ನಡೆಯುವುದಕ್ಕೆ ಮಾತ್ರ ಅವಕಾಶ ನೀಡಿದರೆ ಯಾವ ಕಂಬಳ ನಡೆಯುತ್ತದೆ ಎಂಬುದು ಕಂಬಳ ಅಭಿಮಾನಿಗಳ ಕುತೂಹಲ.
    ಏನೇ ಇರಲಿ ಹೊಕ್ಕಾಡಿಗೋಳಿ ಕಂಬಳ ಯಾವುದೇ ಗೊಂದಲವಿಲ್ಲದೆ ನಡೆಯಲಿ ಎಂಬುದೇ ಕಂಬಳ ಪ್ರೇಮಿಗಳ ಹಾರೈಕೆಯಾಗಿದೆ……

    *ಪೊಡಂಬು ಸಂಜೀವ ಶೆಟ್ಟಿ ಯವರು ಕಂಬಳದ ಓಟಗಾರರಾಗಿದ್ದುಕೊಂಡು ನಂತರದ ದಿನಗಳಲ್ಲಿ ಕಂಬಳದ ಕೋಣಗಳನ್ನು ಪೋಷಿಸಿ ಹಲವಾರು ವರ್ಷಗಳಲ್ಲಿ ಕಂಬಳ ಕೋಣಗಳ ಯಜಮಾನರಾಗಿ ಕಂಬಳ ಕೂಟಗಳಲ್ಲಿ ಭಾಗವಹಿಸಿದವರು.
    ಅವರ ಜೊತೆಯಲ್ಲಿ ಕಂಬಳ ಕೂಟಗಳ ಲ್ಲಿ ಭಾಗವಹಿಸಿ ಅನುಭವ ಹೊಂದಿರುವ ಸಂದೀಪ್ ಶೆಟ್ಟಿ ಹಾಗೂ ರಶ್ಮಿತ್ ಶೆಟ್ಟಿ ಅವರು ಕಳೆದ ಏಳು ವರ್ಷಗಳ ಕಾಲ ಹೊಕ್ಕಾಡಿಗೋಳಿ ಮಹಿಷಮರ್ದಿನಿ ಕಂಬಳ ಸಮಿತಿಯಲ್ಲಿ ಅಧ್ಯಕ್ಷರಾಗಿದ್ದುಕೊಂಡು,ಯಶಸ್ವಿಯಾಗಿ ಕಂಬಳ ಕೂಟವನ್ನು ನಡೆಸಿದ ಅನುಭವಿಯಾಗಿದ್ದಾರೆ* .

    Share Information
    Advertisement
    Click to comment

    Leave a Reply

    Your email address will not be published. Required fields are marked *