Connect with us

    LATEST NEWS

    ಸ್ಪೀಕರ್ ಖಾದರ್ ಗೆ ಹೊಚ್ಚ ಹೊಸ ಫಾರ್ಚೂನರ್ ಕಾರು…!!

    ಮಂಗಳೂರು ಫೆಬ್ರವರಿ 13: ಸ್ಪೀಕರ್ ಖಾದರ್ ಗೆ ಹೊಚ್ಚ ಹೊಸ ಕಾರು ಬಂದಿದ್ದು, ಸುಮಾರು 41 ಲಕ್ಷ ಮೌಲ್ಯದ ಫಾರ್ಚೂನರ್ ಕಾರಿನಲ್ಲಿ ಇನ್ನುಮುಂದೆ ಸ್ಪೀಕರ್ ಖಾದರ್ ಓಡಾಟ ನಡೆಸಲಿದ್ದಾರೆ.


    ಕರ್ನಾಟಕ ವಿಧಾನಸಭೆಯ ಬಜೆಟ್ ಅಧಿವೇಶನದ ಮೊದಲ ದಿನವೇ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದ‌ರ್ ಅವರ ಪ್ರಯಾಣಕ್ಕೆಹಲವು ವಿಶೇಷತೆಗಳನ್ನು ಒಳಗೊಂಡ ಹೊಸ ಐಷಾರಾಮಿ ಫಾರ್ಚೂನರ್ ಕಾರು ಆಗಮಿಸಿದೆ. ಸೀಕರ್‌ ಅವರಿಗೆ ಸಚಿವಾಲಯದಿಂದ ಈ ವಿಶೇಷ ಕಪ್ಪು ಬಣ್ಣದ ಫಾರ್ಚೂನರ್ ಕಾರಿನ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಇದರ ಬೆಲೆ 41 ಲಕ್ಷ ರು.ಗಳಾಗಿದೆ ಎಂದು ತಿಳಿದುಬಂದಿದೆ. ಕಾರಿನ ಮುಂಭಾಗ ಹಾಗೂ ಹಿಂಭಾಗದಲ್ಲಿ ಗಂಡಭೇರುಂಡ ಲಾಂಛನ ಹೊಂದಿದೆ. ರಾಜ್ಯಪಾಲರ ಹೊರತಾಗಿ ಸ್ಪೀಕರ್‌ಗೆ ಮಾತ್ರ ಇದನ್ನು ಹಾಕಲು ಅವಕಾಶ ಇದೆ. ಮಾರುಕಟ್ಟೆಯಲ್ಲಿ ಕಪ್ಪು ಬಣ್ಣದ ಫಾರ್ಚೂನರ್ (ಇ) ಕಾರಿನ ದರ 33.43 ಲಕ್ಷ ರು. (ಪೆಟ್ರೋಲ್) ಹಾಗೂ ಡೀಸೆಲ್ ಕಾರಿನ ದರ 35.93 ರಿಂದ 51.44 ಲಕ್ಷ ಆಗುತ್ತದೆ. ಆದರೆ, ಸ್ಪೀಕರ್ ಅವರಿಗೆ ಖರೀದಿಸಿರುವ ಫಾರ್ಚೂನರ್‌ಗೆ ಕೆಲ ವಿಶೇಷ ವಿನ್ಯಾಸ ಮಾಡಿರುವುದರಿಂದ ಒಟ್ಟು 41 ಲಕ್ಷ ರು. ವೆಚ್ಚವಾಗಿದೆ ಎಂದು ತಿಳಿದುಬಂದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply