Connect with us

  LATEST NEWS

  ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವೈಭವದ ಮಂಗಳೂರು ರಥೋತ್ಸವಕ್ಕೆ ಅದ್ದೂರಿ ಚಾಲನೆ..!

  ಮಂಗಳೂರು : ಮಂಗಳೂರು ನಗರದ ರಥಬೀದಿಯಲ್ಲಿರುವ ಇತಿಹಾಸ ಪ್ರಸಿದ್ದ ಶ್ರೀ ವೆಂಕಟರಮಣ ದೇವಸ್ಥಾನದದಲ್ಲಿ ವೈಭವದ ರಥೋತ್ಸವಕ್ಕೆ ಚಾಲನೆ ದೊರೆತಿದೆ.

   

  ಮಂಗಳೂರು  ರಥೋತ್ಸವ ಪ್ರಯುಕ್ತ ದೇವಸ್ಥಾನದಲ್ಲಿ ಸೋಮವಾರ ಧ್ವಜಾರೋಹಣ ಮೂಲಕ ವಿದ್ಯುಕ್ತವಾಗಿ ಪ್ರಾರಂಭವಾಯಿತು . ರಥೋತ್ಸವ ಪ್ರಯುಕ್ತ ಬೆಳಿಗ್ಗೆ ಮಹಾ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು ಶ್ರೀ ದೇವರು ಯಜ್ಞಕ್ಕೆ ಚಿತ್ತೈಸಿದರು ಬಳಿಕ ಯಜ್ಞದಲ್ಲಿ ಲಘು ಪೂರ್ಣಾಹುತಿ ಧ್ವಜಾರೋಹಣ ನೆರವೇರಿತು . ಬಳಿಕ ಸಮಾರಾಧನೆ ನಡೆಯಿತು . ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಆಗಮನ ಬಳಿಕ ರಾತ್ರಿ ಪೂಜೆ ನಡೆಯಿತು . ಐದು ದಿನಗಳ ಪರ್ಯಂತ ಮಹೋತ್ಸವ ಲಕ್ಷಾಂತರ ಭಜಕರು ಪಾಲ್ಗೊಳ್ಳಲಿದ್ದು ದಿನನಿತ್ಯ ವಿದ್ವತ್ ವೈದಿಕರಿಂದ ಪೂಜಾ ವಿಧಿವಿಧಾನಗಳು ನಡೆಯಲಿರುವುದು ದಿನನಿತ್ಯ ರಾತ್ರಿ ಉತ್ಸವಗಳು ನಡೆಯಲಿರುವುದು . ದಿನಾಂಕ 16 ೦2 2024 ರಂದು ಬ್ರಹ್ಮರಥೋತ್ಸವ ನಡೆಯಲಿದೆ .

  Share Information
  Advertisement
  Click to comment

  You must be logged in to post a comment Login

  Leave a Reply