ಮಂಗಳೂರು ಮೂಲದ ಬೆಡಗಿ ಸಮಂತ ಪ್ರಭು

ಸಮಂತ ರುತ್ ಪ್ರಭು ಮಂಗಳೂರು ಮೂಲದ ಈಕೆ 1986 ರಲ್ಲಿ ಚೆನೈಯಲ್ಲಿ ಜನಿಸಿದ್ದರು . ಈಕೆ ತಮಿಳು ಹಾಗು ತೆಲುಗು ಚಿತ್ರರಂಗದ ಮೂಲಕ ಚಲನಚಿತ್ರ ರಂಗಕ್ಕೆ ಪಾದರ್ಪಣೆ ಮಾಡಿದ್ದರು. ಕಾಲೇಜು ವಿದ್ಯಾಭ್ಯಾಸದಲ್ಲಿರುವಾಗಲೇ ತಮ್ಮನ್ನು ಮಾಡೆಲಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಇದರಿಂದಾಗಿ ಇವರಿಗೆ ಅನೇಕ ಸಿನಿಮಾ ಅವಕಾಶಗಳು ಬರತೊಡಗಿದವು, ಅವರು 2010ಲ್ಲಿ ಗೌತಮ್ ಮೆನಾನ್ ರವರ ಯೆ ಮಾಯ ಚೇಸಾವೇ ಯೆಂಬ ತೆಲುಗು ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದರು. ಈ ಚಿತ್ರವು ಇವರಿಗೆ ಫಿಲ್ಮ ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ ಹಾಗು ನಂದಿ ಅವಾರ್ಡ್ ಅನ್ನು ತಂದುಕೊಟ್ಟಿತು. ನಿತಾನೆ ಯನ್ ಪೊನವಸಂತಮ್ ತಮಿಳು ಸಿನೆಮಾ ಸಮಂತ ಅವರಿಗೆ ಫಿಲ್ಮ ಫೇರ್ ನ ಅತ್ಯುತ್ತಮ ನಟಿ ಪುರಸ್ಕಾರವನ್ನು ತಂದಿಕೊಟ್ಟಿತು. ಹೀಗೇ ಹತ್ತಾರು ಚಿತ್ರಗಳಲ್ಲಿ ನಟಿಸಿದ ಸಮಂತ ಭರವಸೆಯ ನಟಿ ಎಂದೇ ಖ್ಯಾತರಾಗಿದ್ದಾರೆ.