ಮಂಗಳೂರು ಬೆಡಗಿ ಅನುಷ್ಕಾ ಶೆಟ್ಟಿ ಎಂಗೇಜ್ಮೆಂಟ್ ?

ಮಂಗಳೂರು – ಬಾಹುಬಲಿ ಸಿನಿಮಾದ ಮೂಲಕ ಚಿತ್ರ ರಸಿಕರ ಮನ ಗೆದ್ದಿರುವ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಇದೀಗ ರಿಯಲ್ ಲೈಫ್ ಜೋಡಿಯಾಗಲು ಹೊರಟಿದ್ದಾರೆ. ಇದೇ ಡಿಸೆಂಬರನಲ್ಲಿ ಮಂಗಳೂರಿನ ಬೆಡಗಿ ಅನುಷ್ಕಾ ಶೆಟ್ಟಿ ಅವರು ಪ್ರಭಾಸ ಜತೆ ಎಂಗೇಜ್ ಆಗಲಿದ್ದಾರೆ ಎಂಬ ಸುದ್ದಿಯೊಂದು ಹರಡತೊಡಗಿದೆ. ವರ್ಷಾಂತ್ಯದಲ್ಲಿ ವಿವಾಹ ನಿಶ್ಚಿತಾರ್ಥ ಮಾಡಿಕೊಳ್ಳಲು ಇವರು ನಿರ್ಧರಿಸಿದ್ದು ಅದಕ್ಕಾಗಿ ಅನುಷ್ಕಾ ಅವರು ತೂಕ ಇಳಿಸಿಕೊಳ್ಳುವುದರಲ್ಲಿ ಬಿಝಿಯಾಗಿದ್ದಾರೆ.

ಆದರೆ ಎಂಗೇಜ್ಮೆಂಟ್ ವಿಚಾರವನ್ನು ಯಾರು ಅಧಿಕೃತವಾಗಿ ಹೊರ ಹಾಕಿಲ್ಲ ಈ ಹಿಂದೆ ಈ ಜೋಡಿ ರೊಮ್ಯಾಂಟಿಕ್ ಮೂಡ್ನಲ್ಲಿ ಇರುವ ಕುರಿತು ಗುಸುಗುಸು ಕೇಳಿಬಂದಿತ್ತು. ಆದರೆ ಇದನ್ನು ಸರಸವಾಗಿ ತಳ್ಳಿಹಾಕಿದ್ದ ಪ್ರಭಾಸ್ ಅನುಷ್ಕಾ ನಮ್ಮ ನಡುವೆ ಅ೦ತಹದದ್ದೇನು ಇಲ್ಲ ಮದುವೆಯಾಗುವುದಿದ್ದರೆ ಎಲ್ಲರಿಗೂ ಹೇಳಿ ಆಗುತ್ತೇವೆ ಎಂದು ಹೇಳಿ ಜಾರಿಕೊಂಡಿದ್ದರು.