Connect with us

    FILM

    ಸಾನ್ಯಾ ಅಯ್ಯರ್ ಬಿಗ್ ಬಾಸ್ ಮನೆಯಿಂದ ಹೊರಕ್ಕೆ – ಮಕ್ಕಳಂತೆ ಕಣ್ಣೀರಿಟ್ಟ ರೂಪೇಶ್ ಶೆಟ್ಟಿ….!!!

    ಬೆಂಗಳೂರು ನವೆಂಬರ್ 07: ಬಿಗ್ ಬಾಸ್ ಮನೆಯಿಂದ ಈ ವಾರ ಸಾನ್ಯಾ ಅಯ್ಯರ್ ಹೊರಗೆ ಬಂದಿದ್ದು, ಸಾನ್ಯಾ ಅಯ್ಯರ್ ನಾಮಿನೇಟ್ ಆಗುತ್ತಿದ್ದಂತೆ ರೂಪೇಶ್ ಶೆಟ್ಟಿ ಮಕ್ಕಳಂತೆ ಕಣ್ಣೀರಿಟಿದ್ದಾರೆ.


    ಓಟಿಟಿಯಿಂದ ಟಿವಿ ಬಿಗ್ ಬಾಸ್ ಗೆ ಸಾನ್ಯಾ ಅಯ್ಯರ್ ಎಂಟ್ರಿ ಕೊಟ್ಟಿದ್ದರು, ಇದೀಗ ಈ ವಾರ ಮನೆಯಿಂದ ಹೊರಗೆ ಹೋಗಿದ್ದಾರೆ. ಓಟಿಟಿಯಿಂದ ಸಾನ್ಯಾ ಹಾಗೂ ರೂಪೇಶ್ ಶೆಟ್ಟಿ ಜೋಡಿ ಬಿಗ್ ಬಾಸ್ ನ ರೊಮ್ಯಾಂಟಿಕ್ ಕಪಲ್ ಆಗಿದ್ದರು. ಅವರ ರೋಮ್ಯಾನ್ಸ್ ಸ್ವಲ್ಪ ಜಾಸ್ತಾಯಾಗಿದ್ದಕ್ಕೆ ಕೊನೆಗೂ ಸುದೀಪ್ ಅವರಿಗೆ ಕ್ಲಾಸ್ ಕೂಡ ತೆಗೆದುಕೊಂಡಿದ್ದರುಪ, ಆದರೂ ಬಿಗ್ ಬಾಸ್ ನಲ್ಲಿ ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಅವರ ಗೆಳತನ ಮುಂದುವರೆದಿತ್ತು, ಇದೀಗ ಬಿಗ್ ಬಾಸ್ ಈ ರೋಮ್ಯಾಂಟಿಕ್ ಕಪಲ್ ಗಳನ್ನು ಬೇರೆ ಮಾಡಿದೆ.


    ಇದೀಗ ವೀಕ್ಷಕರಿಂದ ಅತೀ ಕಡಿಮೆ ಮತ ಪಡೆದ ಸಾನ್ಯಾ ಅಯ್ಯರ್‌ ಮನೆಯಿಂದ ನಿರ್ಗಮಿಸಿದ್ದಾರೆ. ಬಿಗ್‌ ಬಾಸ್‌ ಮನೆಯಿಂದ ಸಾನ್ಯಾ ಅಯ್ಯರ್‌ ಹೊರ ಹೋಗುತ್ತಿರುವುದು ಘೋಷಣೆಯಾಗುತ್ತಿದ್ದಂತೆಯೇ, ರೂಪೇಶ್‌ ಶೆಟ್ಟಿ ಕಣ್ಣೀರಿಟ್ಟಿದ್ದಾರೆ. ಸಾನ್ಯಾ ಅಯ್ಯರ್‌ ಅವರ ಮಡಿಲಿನಲ್ಲಿ ತಲೆ ಇಟ್ಟು ದುಃಖಿತರಾಗಿದ್ದಾರೆ. ನಿನ್ನನ್ನು ನಾನು ತುಂಬಾ ಮಿಸ್‌ ಮಾಡಿಕೊಳ್ಳುತ್ತೇನೆ ಎಂದು ಬೇಸರಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply