LATEST NEWS
ರಸ್ತೆ ಹೊಂಡಕ್ಕೆ ಮಗು ಬಲಿ – ಅಪ್ಪನ ವಿರುದ್ದ ಕೇಸು

ರಸ್ತೆ ಹೊಂಡಕ್ಕೆ ಮಗು ಬಲಿ – ಅಪ್ಪನ ವಿರುದ್ದ ಕೇಸು
ಉಡುಪಿ ಅಕ್ಟೋಬರ್ 9: ಪರ್ಕಳ ರಾಷ್ಟ್ರೀಯ ಹೆದ್ದಾರಿಯ ಹೊಂಡ ಅಕ್ಟೋಬರ್ 2 ರಂದು ಪುಟ್ಟ ಮಗುವೊಂದನ್ನು ಬಲಿ ಪಡೆದ ಪ್ರಕರಣದಲ್ಲಿ ಮಗುವಿನ ಅಪ್ಪನ ವಿರುದ್ದವೇ ಕೇಸು ದಾಖಲಿಸಿದ ಘಟನೆ ನಡೆದಿದೆ. ಪೊಲೀಸ್ ಇಲಾಖೆಯ ಈ ಕ್ರಮದ ಇದರ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಪರ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಕ್ಟೋಬರ್ 2 ರಂದು ಉದ್ಯಾವರ ಕುತ್ಪಾಡಿ ನಿವಾಸಿಗಳಾದ ಉಮೇಶ್ ಮತ್ತು ಪ್ರಮೋದಾ ದಂಪತಿಗಳ ಒಂದೂವರೆ ವರ್ಷದ ಮಗು ಚಿರಾಗ್ ನೊಂದಿಗೆ ಪರ್ಕಳದಿಂದ ಅತ್ರಾಡಿಗೆ ತೆರಳುವಾಗ ಪರ್ಕಳದ ಬಿ.ಎಂ ಶಾಲೆ ಬಳಿ ಹೊಂಡ ಗುಂಡಿಗಳನ್ನು ತಪ್ಪಿಸಲು ಹೋಗಿ ಬೈಕ್ ಸ್ಕೀಡ್ ಆಗಿ ಬಿದ್ದಿದ್ದರು. ಈ ಸಂದರ್ಭದಲ್ಲಿ ಮಗು ಚಿರಾಗ್ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿತ್ತು.

ಈ ಹಿನ್ನಲೆಯಲ್ಲಿ ಪ್ರಮೋದರ ಸಹೋದರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ದ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಆಗಿದ್ದೆ ಬೇರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೇಲೆ ಕೇಸ್ ದಾಖಲಾಗುವ ಬದಲು ಮಗುವಿನ ಅಪ್ಪನ ಮೇಲೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಮಗುವನ್ನು ಕಳೆದುಕೊಂಡ ದುಃಖದಲ್ಲಿದ್ದವರಿಗೆ ಈಗ ಪೊಲೀಸ್ ಕೇಸಿನ ಬರೆ ಎಳೆದಂತಾಗಿದೆ.
ರಸ್ತೆಯ ದುರವಸ್ಥೆಗೆ ಮಗುವನ್ನು ಕಳೆದುಕೊಂಡವರ ಮೇಲೆ ಕೇಸ್ ದಾಖಲಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹದಗೆಟ್ಟ ರಸ್ತೆ ರಿಪೇರಿ ಮಾಡದವರ ಮೇಲೆ ಕೆಸು ದಾಖಲಿಸುವುದನ್ನು ಬಿಟ್ಟು ಪೊಲೀಸರು ಸಂತ್ರಸ್ಥರ ವಿರುದ್ದ ಕೇಸು ದಾಖಲಿಸುವುದು ದುರದೃಷ್ಠಕರ ಎಂದು ಪ್ರತಿಕ್ರಿಯೆಗಳು ಬರಲಾರಂಭಿಸಿದೆ.