Connect with us

    LATEST NEWS

    ವೆಬ್ ಸೈಟ್ ಗೆ 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪುತ್ರ

    ವೆಬ್ ಸೈಟ್ ಗೆ 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪುತ್ರ

    ಹೊಸದೆಹಲಿ ಅಕ್ಟೋಬರ್ 9: ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಅಮಿತ್ ಷಾ ಅವರ ಪುತ್ರ ಜಯ್ ಶಾ ಅವರು ವೆಬ್ ಸೈಟ್ ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಲಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. 2014 ರ ಮೇ ತಿಂಗಳಿನಿಂದ ಜಯ್ ಶಾ ಮಾಲೀಕತ್ವದ ಕಂಪೆನಿಯು ಆದಾಯದಲ್ಲಿ ಅಕ್ರಮವಾಗಿ ತೀವ್ರ ಏರಿಕೆ ಕಂಡಿದೆ ಎಂದು ವೆಬ್ ಸೈಟ್ ವರದಿ ಮಾಡಿತ್ತು.

    ಮಾರ್ಚ್ 2013 ಮತ್ತು 2014 ರ ಅಂತ್ಯದ ಹಣಕಾಸು ವರ್ಷಗಳಲ್ಲಿ ಜಯ್ ಶಾ ಒಡೆತನದ ಕಂಪೆನಿ ಟೆಂಪಲ್ ಎಂಟರ್ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ಅನಧಿಕೃತ ಚಟುವಟಿಕೆಗಳಲ್ಲಿ ತೊಡಗಿತ್ತು ಎಂದು ವೆಬ್ ಸೈಟ್ ದಿವೈರ್ ಅಂಕಣ ಪ್ರಕಟಿಸಿತ್ತು.

    ಈ ಹಿನ್ನಲೆಯಲ್ಲಿ ಜಯ್ ಶಾ ಅವರು ಸುಳ್ಳು ಸುದ್ದಿ ಪ್ರಕಟಿಸಿ ನನ್ನ ಮಾನನಷ್ಟವಾದ ಹಿನ್ನಲೆಯಲ್ಲಿ ವೆಬ್ ಸೈಟ್ ವಿರುದ್ದ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ದಾಖಲಿಸಲಿದ್ದಾರೆ.

    ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಜಯ್ ಶಾ ನನ್ನ ವ್ಯವಹಾರಗಳು ಸಂಪೂರ್ಣ ನ್ಯಾಯ ಸಮ್ಮತವಾಗಿದ್ದು ಮತ್ತು ನನ್ನ ತೆರಿಗೆ ದಾಖಲೆಗಳು ನನ್ನ ವ್ಯವಹಾರದ ಪಾರದರ್ಶಕತೆಯನ್ನು ತೋರಿಸುತ್ತದೆ ಎಂದು ಅವರು ಹೇಳಿದರು. ನನ್ನ ವ್ಯವಹಾರಗಳು ಸಂಪೂರ್ಣ ವಾಗಿ ನ್ಯಾಯಸಮ್ಮತವಾಗಿ ಬ್ಯಾಂಕಿಂಗ್ ಮೂಲಕ ನಡೆಸಲಾಗುತ್ತಿದೆ ಎಂದು ಶಾ ಹೇಳಿಕೆಯಲ್ಲಿ ಹೇಳಿದ್ದಾರೆ,

    Share Information
    Advertisement
    Click to comment

    You must be logged in to post a comment Login

    Leave a Reply