LATEST NEWS
ಪ್ರತಿಯೊಬ್ಬ ಹಿಂದೂ ಮನೆಯಲ್ಲಿ ತಲವಾರ್ ಇಟ್ಕೊಳ್ಳಿ : ಪ್ರಮೋದ್ ಮುತಾಲಿಕ್
ಪ್ರತಿಯೊಬ್ಬ ಹಿಂದೂ ಮನೆಯಲ್ಲಿ ತಲವಾರ್ ಇಟ್ಕೊಳ್ಳಿ – ಪ್ರಮೋದ್ ಮುತಾಲಿಕ್
ಮಂಗಳೂರು ಅಕ್ಟೋಬರ್ 8: ದೇಶದ ರಕ್ಷಣೆಗೆ ಕುಟುಂಬದ ರಕ್ಷಣೆಗೆ ಪ್ರತಿಯೊಂದು ಹಿಂದೂ ಕುಟುಂಬ ಆಯುಧವಾಗಿ ತಲವಾರನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕೆಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕರೆ ನೀಡಿದ್ದಾರೆ. ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ಮಾತ್ರ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀರಾಮ ಸೇನೆ ಹಾಗೂ ಶ್ರೀ ದುರ್ಗಾ ಸೇನೆ ಮಂಗಳೂರು ಕದ್ರಿಯಲ್ಲಿ ಮಾತೃ ಪೂಜೆ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದ ಅಂಗವಾಗಿ ಮಾತೆಯರ ಪಾದಪೂಜೆ ಮಾಡಿ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಇವತ್ತಿನ ದಿನದಲ್ಲಿ ಕ್ರಿಶ್ಚನ್ ಕಾನ್ವೆಂಟ್ ಗಳ ಮೂಲಕ ಪಾಶ್ಚಾತ್ಯ ಅನಿಷ್ಟಗಳು ಸಮಾಜದಲ್ಲಿ ತೂರಿಕೊಳ್ಳುತ್ತವೆ ಎಂದು ವಿಷಾದ ವ್ಯಕ್ತಪಡಿಸಿದರು. ಹಿಂದೆ ವೃದ್ಧಾಶ್ರಮ, ಅನಾಥಾಶ್ರಮ ಇರಲಿಲ್ಲ ಈ ವಿಕೃತಿಗಳು ವಿದೇಶದಿಂದ ನಮ್ಮ ದೇಶಕ್ಕೆ ನುಸುಳಿವೆ ಈ ಹಿನ್ನೆಲೆಯಲ್ಲಿ ಈ ಸಮಾಜದಲ್ಲಿ ಒಳನುಸುಳಿರುವ ಕೇಕು, ಕ್ಯಾಂಡಲ್, ಮಮ್ಮಿ,ಡ್ಯಾಡಿ ಸಂಸ್ಕೃತಿಯನ್ನು ಕಿತ್ತು ಹಾಕಬೇಕು ಎಂದು ಹೇಳಿದರು.
ದೇಶದಲ್ಲಿ ಇಸ್ಲಾಮಿಕ್ ಶಕ್ತಿಗಳು ದೇಶವನ್ನು ಕಬಳಿಸಲು ಹವಣಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ ಅವರು ದೇಶದ ಉದ್ದಗಲಕ್ಕೂ ಮಸೀದಿ, ಪ್ರಾರ್ಥನಾ ಮಂದಿರಗಳನ್ನು ನಿರ್ಮಾಣಕ್ಕೆ ಮುಸ್ಲಿಮರಿಗೆ ಅವಕಾಶ ಮಾಡಿಕೊಡಲಾಗಿದೆ.
ಆದರೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಅದೇ ಮುಸ್ಲಿಮರು ಅಡ್ಡ ಬರುತ್ತಿದ್ದಾರೆ ಎಂದು ಕಿಡಿಕಾರಿದರು. ಶ್ರೀರಾಮ ಮಂದಿರಕ್ಕೆ ಅಡ್ಡ ಬರುತ್ತಿರುವ, ಗೋಹತ್ಯೆ ನಿಲ್ಲಿಸದ, ಭಾರತ್ ಮಾತಾ ಕಿ ಜೈ ಹೇಳದ ಮುಸ್ಲಿಮರಿಗೆ ಸಾಮಾಜಿಕ ಹಾಗೂ ಆರ್ಥಿಕ ಬಹಿಷ್ಕಾರ ಹಾಕಬೇಕು ಎಂದು ಅವರು ಕರೆ ನೀಡಿದರು .
ದೇಶದಲ್ಲಿ ಲವ್ ಜಿಹಾದ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದೇಶದಲ್ಲಿ ಒಂದು ವೇಳೆ ಆಂತರಿಕ ಯುದ್ಧ, ಬೀದಿ ಕಾಳಗಗಳು ನಡೆದರೆ ದೇಶದ ರಕ್ಷಣೆಗೆ, ಕುಟುಂಬದ ರಕ್ಷಣೆಗೆ ಪ್ರತಿಯೊಂದು ಹಿಂದೂ ಕುಟುಂಬ ಆಯುಧವಾಗಿ ತಲವಾರನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕೆಂದು ಅವರು ಹೇಳಿದರು.
VIDEO
Facebook Comments
You may like
ಅನ್ಯಧರ್ಮದ ಯುವಕರೊಂದಿಗೆ ತಿರುಗಾಡುತ್ತಿದ್ದ ಯುವತಿಯರು…ಯುವಕ ಯುವತಿಯರನ್ನು ಪೊಲೀಸರಿಗೊಪ್ಪಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು
ಆನೆಗೆ ಬೆಂಕಿ ಇಟ್ಟ ಪಾಪಿಗಳು! ಸುಟ್ಟ ನೋವು ತಾಳಲಾರದೆ ಆನೆ ಸಾವು
ರೈತ ಕಾನೂನು ವಿರೋಧಿ ಹೋರಾಟದಲ್ಲಿ ಹಿಂದೂ ಮಹಿಳೆಯರಿಗೆ ಅವಮಾನ, ವಿವಾದಕ್ಕೆ ಕಾರಣವಾದ ಯೋಗರಾಜ್ ಸಿಂಗ್……….
ಬೈಕ್ ಮತ್ತು ಕಾರಿನ ನಡುವೆ ಭೀಕರ ರಸ್ತೆ ಅಪಘಾತ – ಹಿಂದೂ ಸಂಘಟನೆಯ ಕಾರ್ಯಕರ್ತ ಬಲಿ..!
ಸಾಮಾಜಿಕ ಜಾಲತಾಣದಲ್ಲಿ ಹಿಂದೂ ದೇವರ ಅವಹೇಳನ – ವಿಟ್ಲ ಪೋಲೀಸ್ ಠಾಣೆಗೆ ದೂರು
ಗುರುಪುರ ಕಂದಾವರದಲ್ಲಿ ತಲವಾರು ದಾಳಿ ನಡೆಸಿ ಜಮಾಅತಿನ ಮಾಜಿ ಅಧ್ಯಕ್ಷರ ಕೊಲೆಗೆ ಯತ್ನ
You must be logged in to post a comment Login