Connect with us

    FILM

    ರಜನಿ ಸ್ಟೈಲ್ ನಲ್ಲಿ ರಿಷಬ್ ಶೆಟ್ಟಿ -ನೀವು ಒಂದ್ ಸಲ ಹೊಗಳಿದ್ರೆ… ನೂರು ಸಲ ಹೊಗಳ್ದ೦ಗೆ ನಮಗೆ

    ಚೆನ್ನೈ ಅಕ್ಟೋಬರ್ 29: ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ನಟ ನಿರ್ದೇಶಕ ರಿಷಬ್ ಶೆಟ್ಟಿ ಚೆನ್ನೈನ ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ. ನೀವು ಒಂದ್ ಸಲ ಹೊಗಳಿದ್ರೆ… ನೂರು ಸಲ ಹೊಗಳ್ದ೦ಗೆ ನಮಗೆ ಎಂದು ಟ್ವೀಟ್ ಮಾಡಿದ್ದಾರೆ.


    ರಜನಿಕಾಂತ್ ಅವರು ಕಾಂತಾರ ಸಿನೆಮಾವನ್ನು ನೋಡಿ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲದೆ ತಿಳಿದಿರುವುದಕ್ಕಿಂತ ತಿಳಿಯದಿರುವುದು ಬಹಳಷ್ಟಿರುತ್ತವೆ. ಹೊಂಬಾಳೆ ಫಿಲಂಸ್‌, ರಿಷಬ್‌ ಶೆಟ್ಟಿ ಉತ್ತಮ ಸಿನಿಮಾ ನೀಡಿದ್ದಾರೆ.

    ರಿಷಬ್‌ ನಟನೆ, ನಿರ್ದೆಶನ, ಬರವಣಿಗೆಗೆ ಹ್ಯಾಟ್ಸಪ್‌. ಮೈನವಿರಳೇಸಿರುವ ಅನುಭವ ನೀಡಿದೆ ಎಂದಿದ್ದರು. ಇದರ ಬೆನ್ನಿಗೇ, ರಿಷಬ್‌ ಶೆಟ್ಟಿ ಚೆನ್ನೈನಲ್ಲಿ ರಜನಿಕಾಂತ್‌ ಅವರನ್ನು ಭೇಟಿಯಾಗಿದ್ದಾರೆ. ಭೇಟಿಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

    ‘ನೀವು ಒಂದ್ ಸಲ ಹೊಗಳಿದ್ರೆ… ನೂರು ಸಲ ಹೊಗಳ್ದ೦ಗೆ ನಮಗೆ. ಧನ್ಯವಾದಗಳು ರಜನಿಕಾಂತ್‌ ಸರ್‌. ನಮ್ಮ ಕಾಂತಾರ ಚಿತ್ರ ನೋಡಿ ನೀವು ಮೆಚ್ಚಿದ್ದಕ್ಕೆ ನಾವು ಸದಾ ಆಭಾರಿ’ ಎಂದು ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ. ಕಾಂತಾರ ಸಿನಿಮಾ ಸದ್ಯ ತಮಿಳು, ತೆಲುಗು, ಹಿಂದಿ, ಮಲಯಾಳದಲ್ಲಿಯೂ ಉತ್ತಮ ಸ್ಪಂದನೆ ಪಡೆಯುತ್ತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply