Connect with us

    LATEST NEWS

    ಗೋಮಾಳದ ಭೂಮಿಯನ್ನು ಗೋಶಾಲೆಗಳಿಗೆ ನೀಡಲು ಕಂದಾಯ ಮಂತ್ರಿ ಅಸ್ತು

    ಉಡುಪಿ, ಜನವರಿ 25: ರಾಜ್ಯದಲ್ಲಿನ ಗೋಮಾಳ ಭೂಮಿಗಳನ್ನು ಆಯಾ ಜಿಲ್ಲೆಗಳಲ್ಲಿನ ನೋಂದಾಯಿತ ಗೋಶಾಲೆಗಳ ಬೇಡಿಕೆಗಳಿಗೆ ಅನುಸಾರವಾಗಿ ಸೂಕ್ತ ನಿಯಮಾವಳಿಗಳೊಂದಿಗೆ ನೀಡುವ ಬಗ್ಗೆ ಕಂದಾಯ ಮಂತ್ರಿ ಆರ್ ಅಶೋಕ್ ಸಮ್ಮತಿಸಿದ್ದಾರೆ .

    ಈ ಬಗ್ಗೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತಮಗೆ ಸಲ್ಲಿಸಿದ ಪತ್ರವನ್ನು ಸೋಮವಾರ ಉಡುಪಿಯಲ್ಲಿ ಸ್ವೀಕರಿಸಿದ ಸಂದರ್ಭ ಮಾತುಕತೆ ನಡೆಸಿದ ಆರ್ ಅಶೋಕ್ ಅವರು ಈ ಬಗ್ಗೆ ಪೂರ್ಣ ಸಮ್ಮತಿ ವ್ಯಕ್ತಪಡಿಸಿದರು .

    ರಾಜ್ಯದಲ್ಲಿ ಗೋ ಹತ್ಯಾ ನಿಷೇಧ ಕಾನೂನು ಜಾರಿಗೆ ಬಂದಿರುವುದರಿಂದ ಗೋ ರಕ್ಷಣೆಯ ಕಾರ್ಯಗಳಿಗೂ ಸರಕಾರ ಹೆಚ್ಚು ಗಮನ ಹರಿಸಬೇಕಾಗಿದೆ . ಗೋಮಾಳ ಭೂಮಿಗಳು ರಾಜ್ಯದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಅತಿಕ್ರಮಣಗೊಂಡಿವೆ . ಆದರೂ ಈಗ ಉಳಿದಿರುವ ಭೂಮಿಗಳನ್ನು ಗೋಶಾಲೆಗಳಿಗೆ ನೀಡುವುದರಿಂದ ಸದ್ರಿ ಭೂಮಿ ಸದುದ್ದೇಶಕ್ಕೆ ಬಳಕೆಯಾಗುತ್ತದೆ ಮತ್ತು ಗೋಶಾಲೆಗಳಿಗೆ ಬಲಬಂದಾಗುತ್ತದೆ ಎಂದು ಶ್ರೀಗಳು ಪತ್ರದಲ್ಲಿ ಉಲ್ಲೇಖಿಸಿದ್ದಾರೆ . ಉಡುಪಿಯಲ್ಲಿ ಲಭ್ಯವಿರುವ ಗೋಮಾಳ ಭೂಮಿಗಳ ವಿವರ ಮತ್ತು ಜಿಲ್ಲೆಯ ಗೋಶಾಲೆಗಳ ವಿವರವನ್ನು ಶೀಘ್ರ ನೀಡುವಂತೆ ಸಚಿವರು ಸೂಚಿಸಿದರು .

    ಈ ಸಂದರ್ಭ ಶಾಸಕ ಕೆ ರಘುಪತಿ ಭಟ್ ಉಪಸ್ಥಿತರಿದ್ದು ಪೇಜಾವರ ಶ್ರೀಗಳು ಗೋರಕ್ಷಣೆಯ ಬಗ್ಗೆ ಮಾಡುತ್ತಿರುವ ವಿಶೇಷ ಕಾರ್ಯಗಳನ್ನು ವಿವರಿಸಿದರು ಮತ್ತು ರಾಜ್ಯದೆಲ್ಲೆಡೆ ಗೋಶಾಲೆಗಳಿಗೆ ಬಲ ತುಂಬುವುದು ಶ್ರೀಗಳ ಕಾಳಜಿಯಾಗಿದೆ ಆದ್ದರಿಂದ ಶ್ರೀಗಳ ಈ ಮನವಿಯನ್ನು ಅಂಗೀಕರಿಸಬೇಕೆಂದು ಸಚಿವರಲ್ಲಿ ಮನವಿ ಮಾಡಿದರು .

    ಶ್ರೀಗಳ ಪರವಾಗಿ ವಾಸುದೇವ ಭಟ್ ಪೆರಂಪಳ್ಳಿ ಮತ್ತು ಎಸ್ ವಿ ಭಟ್ ಸಚಿವರನ್ನು ಭೇಟಿಮಾಡಿ ಶಾಲು ಹೊದೆಸಿ ಗೌರವಿಸಿ ಮನವಿ ಅರ್ಪಿಸಿದರು .

    Share Information
    Advertisement
    Click to comment

    You must be logged in to post a comment Login

    Leave a Reply