KARNATAKA
ಬಿಗ್‌ಬಾಸ್ ಖ್ಯಾತಿಯ ನಟಿ ಜಯಶ್ರೀ ಆತ್ಮಹತ್ಯೆ
ಬೆಂಗಳೂರು, ಜನವರಿ 25: ಬಿಗ್‌ಬಾಸ್ ಖ್ಯಾತಿಯ ನಟಿ ಜಯಶ್ರೀ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಗಡಿ ರಸ್ತೆಯ ವೃದ್ಧಾಶ್ರಮದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೇ ಹೇಳಲಾಗುತ್ತಿದೆ.
ಜಯಶ್ರೀ ರಾಮಯ್ಯ ಅವರು ಈ ಹಿಂದೆ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವಿಚಾರವಾಗಿ ನಟ ಸುದೀಪ್ ಕೂಡ ಬುದ್ಧಿ ಹೇಳಿದ್ದರು. ಆದರೇ ಇಂದು ನೇಣು ಹಾಕಿಕೊಂಡಿದ್ದಾರೆ. ಮಾಗಡಿ ರಸ್ತೆಯ ಪ್ರಗತಿ ಲೇಔಟ್‌ನಲ್ಲಿನ ಸಂಧ್ಯಾ ಕಿರಣ ವೃದ್ಧಾಶ್ರಮದಲ್ಲಿ ನೇಣು ಹಾಕಿಕೊಂಡಿದ್ದಾರೆ. ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೇ ಹೇಳಲಾಗುತ್ತಿದೆ.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕುಟುಂಬದಿಂದ ದೂರ ಇದ್ದ ಆಕೆ ವೃದ್ಧಾಶ್ರಮದಲ್ಲಿದ್ದರು. ರೂಮ್‌ನಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರ ತನಿಖೆಯಿಂದಷ್ಟೇ ಆತ್ಮಹತ್ಯೆ ರಹಸ್ಯ ಹೊರಬರಬೇಕಿದೆ.
ಬಿಗ್‌ಬಾಸ್ 3ರ ಸ್ಪರ್ಧೆಯಲ್ಲಿ ಆಕೆ ಕಂಟೆಸ್ಟ್ ಮಾಡಿದ್ದರು. ಇತ್ತೀಚೆಗೆ ಆಕೆ ಸಿನಿಮಾ ರಂಗದಿಂದ ಕೂಡ ದೂರ ಉಳಿದಿದ್ದರು. ಒಂದು ಮೂಲಗಳ ಪ್ರಕಾರ ಆಕೆಗೆ ಆಫರ್‌ಗಳು ಕೂಡ ಕಡಿಮೆಯಾಗಿದ್ದವರು ಎಂದು ಹೇಳಲಾಗುತ್ತಿದೆ.
ಈ ಹಿಂದೆ ಜೆಪಿ ನಗರದಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಪಡೆದುಕೊಂಡಿದ್ದರು. ಅವಕಾಶಗಳಿಂದ ವಂಚಿತರಾಗಿದ್ದು ಮತ್ತು ಕೌಟುಂಬಿಕ ಕಲಹದಿಂದ ಆಕೆ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಈ ಹಿಂದೆ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾಗ ಕೌಟುಂಬಿಕ ಕಲಹದ ಬಗ್ಗೆ ಕೂಡ ಹೇಳಿಕೊಂಡಿದ್ದರು. ಮುಂದೆ ನಾನು ಆತ್ಮಹತ್ಯೆ ಯೋಚನೆ ಮಾಡುವುದಿಲ್ಲ. ಧೈರ್ಯವಾಗಿ ಬದುಕು ತೋರಿಸುತ್ತೇನೆ ಎಂದು ಸುದೀಪ್ ಬಳಿ ಹೇಳಿಕೊಂಡಿದ್ದರು.
You must be logged in to post a comment Login