Connect with us

BELTHANGADI

ಬಂಗಾರ್ ಪಲ್ಕೆಯ ಜಲಪಾತದ ಗುಡ್ಡ ಕುಸಿದು ಓರ್ವ ಮೃತ್ಯು

ಬೆಳ್ತಂಗಡಿ , ಜನವರಿ25: ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಬಂಗಾರ್ ಪಲ್ಕೆ ಎಂಬಲ್ಲಿ ಅರಣ್ಯ ಪ್ರದೇಶದ ಒಳಗಡೆ ಇರುವ ಜಲಪಾತದಲ್ಲಿ ಗುಡ್ಡ ಕುಸಿದು ಓರ್ವ ಮೃತ ಪಟ್ಟ ಘಟನೆ ನಡೆದಿದೆ.

ಉಜಿರೆ ಮೂಲದ ನಾಲ್ವರು ಯುವಕರು ಜಲಪಾತದಲ್ಲಿ ಇರುವ ಸಮಯ ಜಲಪಾತದ ಅಂಚಿನ‌ ಗುಡ್ಡ ದಿಢೀರನೆ ಕುಸಿತ ಉಂಟಾಗಿ ಮೂವರು ಮಣ್ಣಿನಡಿಯಲ್ಲಿ ಸಿಲುಕಿದ್ದು ಮೂವರಲ್ಲಿ ಒಬ್ಬರು ಮಣ್ಣಿನಡಿಯಲ್ಲಿ ಸಿಲುಕಿ ಕಾಣೆಯಾಗಿದ್ದು ಇನ್ನಿಬ್ಬರು ಪಾರಾಗಿರುತ್ತಾರೆ.

ಮೃತಪಟ್ಟ ವ್ಯಕ್ತಿ ಸನತ್ ಶೆಟ್ಟಿ ಪ್ರಾಯ 26 ವರ್ಷ, ತಂದೆ: ಕೃಷ್ಣಯ್ಯ ವಾಸುದೇವ ಶೆಟ್ಟಿ ವಾಸ: ಕಾಶಿಬೆಟ್ಟು , ಉಜಿರೆ ಗ್ರಾಮ ಬೆಳ್ತಂಗಡಿ ತಾಲೂಕು ಎಂದು ಗುರುತಿಸಲಾಗಿದ್ದು ಮೃತದೇಹವನ್ನು ಮಣ್ಣಿನ ಅಡಿಯಿಂದ ಇನ್ನು ತೆಗೆಯಬೇಕಾಗಿರುತ್ತದೆ.

Advertisement
Click to comment

You must be logged in to post a comment Login

Leave a Reply