KARNATAKA
ರಾಯಚೂರು – ಕಲ್ಲು ಬಂಡೆ ಅಡಿಗೆ ಸಿಲುಕಿ ಮೂವರು ಮಕ್ಕಳ ಧಾರುಣ ಅಂತ್ಯ

ರಾಯಚೂರು ಅಕ್ಟೋಬರ್ 15: ಜಮೀನಿನಲ್ಲಿ ಆಟವಾಡುತ್ತಿರುವ ವೇಳೆ ಬೃಹತ್ ಕಲ್ಲು ಬಂಡೆ ಉರುಳಿ ಬಂಡೆ ಅಡಿ ಸಿಲುಕಿ ಮೂವರು ಮಕ್ಕಳು ಸಾವನಪ್ಪಿದ ಘಟನೆ ಲಿಂಗಸೂಗುರು ತಾಲೂಕಿನ ಗೌಡೂರು ತಾಂಡದಲ್ಲಿ ನಡೆದಿದೆ.
ಮೃತರನ್ನು ಮಂಜುನಾಥ್ (9), ವೈಶಾಲಿ (6) ರಘು (8) ಎಂದು ಗುರುತಿಸಲಾಗಿದೆ. ಮೂವರು ಮಕ್ಕಳು ಶಾಲೆಗೆ ರಜೆ ಇದೆ ಎಂದು ಪೋಷಕರ ಜೊತೆ ಜಮೀನಿಗೆ ತೆರಳಿದ್ದಾರೆ. ಈ ವೇಳೆ ಜಮೀನಿನ ಸಮೀಪದಲ್ಲಿದ್ದ ಬೃಹತ್ ಬಂಡೆಯ ಕೆಳಗೆ ಆಡವಾಡುತ್ತಿದ್ದರು. ಈ ವೇಳೆ ಬಂಡೆ ಜಾರಿ ಮಕ್ಕಳ ಮೇಲೆ ಬಿದ್ದಿದೆ. ಈ ವೇಳೆ ಪೋಷಕರು ಓಡಿ ಬಂದರು ಬೃಹತ್ ಬಂಡೆ ಜಾರಿಸಲು ಆಗದೆ. ಅವರ ಎದುರೇ ಮಕ್ಕಳು ಪ್ರಾಣ ಬಿಟ್ಟಿದ್ದಾರೆ. ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
