FILM
2024ರ ಟಾಪ್ ನಟಿಯಾಗಿ ಹೊರ ಹೊಮ್ಮಿದ ಕೊಡಗಿನ ಬೆಡಗಿ, ರಶ್ಮಿಕಾ ಮಂದಣ್ಣ ಕೈಯಲ್ಲಿವೆ ಬರೋಬ್ಬರಿ 6 ಸಿನಿಮಾ..!
ಹೈದ್ರಾಬಾದ್ : 2024 ಕನ್ನಡತಿ ರಶ್ಮಿಕಾ ಮಂದಣ್ಣನ ಪಾಲಿಗೆ ಅದೃಷ್ಟದ ವರ್ಷ ಅಂತನೇ ಹೇಳಬಹುದು. ಕಳೆ ದ ವರ್ಷಕೂಡ ಅಣೆಕ ಹಿಟ್ ಸಿನಿಮಾಗಳನ್ನು ನೀಡಿದ್ದ ರಶ್ಮಿಕಾ ಈ ಬಾರಿ ಅನಿಮಲ್ ಬಿಡುಗಡೆಯಾದ ಬಳಿಕವಂತೂ ಫುಲ್ ಬ್ಯುಸಿಯಾಗಿದ್ದಾರೆ. ಇದೀಗ ಈ ಕಿರಿಕ್ ಪಾರ್ಟಿ ಚೆಲುವೆಯ ಕೈಯಲ್ಲಿ ಬರೋಬ್ಬರಿ 6 ಸಿನಿಮಾಗಳಿವೆ ಎನ್ನಲಾಗಿದೆ.
ಸದ್ಯಕ್ಕಂತೂ ಇಂಡಸ್ಟ್ರಿಯ ಅತ್ಯಂತ ಬೇಡಿಕೆಯ ನಟಿ ರಶ್ಮಿಕಾ ಮಂದಣ್ಣರಾಗಿದ್ದಾರೆ. ಕಾರಣ ಅವರ ಸಿನಿಮಾಗಳಿಗೆ ಭರ್ಜರಿ ಡಿಮ್ಯಾಂಡ್ ಇದೆ. ಆದ್ದರಿಂದ ಹೆಸರಾಂತ ನಿರ್ಮಾಪಕರು ಕೂಡ ಕಾಲ್ ಶಿಟ್‌ಗಾಗಿ ರಶ್ಮಿಕಾಳ ಮನೆಬಾಗಿಲು ಕಾಯುವ ಪ್ರಸಂಗ ಎದುರಾಗಿದೆ.ಈ ಬಾರಿ ರಶ್ಮಿಕಾ ಅವರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು ಪುಷ್ಪ 2 ರಿಲೀಸ್ಗೆ ಮೊದಲೇ ಸಖತ್ ರೆಸ್ಪಾನ್ಸ್ ಪಡೆಯುತ್ತಿದೆ. ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ನಾಯಕತ್ವದ ಈ ಸಿನಿಮಾದ ಶೂಟಿಂಗ್ ಕೂಡ ತುಂಬಾ ವೇಗವಾಗಿ ಮುಂದುವರಿದ್ದು ರಶ್ಮಿಕಾ ಕೂಡ ಅಪಾರ ನೀರಿಕ್ಷೆ ಇಟ್ಟುಕೊಂಡಿದ್ದಾಳೆ.
ಜೊತೆಗೆ ‘ದಿ ಗರ್ಲ್ಫ್ರೆಂಡ್’ ಎನ್ನುವ ಸಿನಿಮಾ ಕೂಡಾ ಮಾಡುತ್ತಿದ್ದಾರೆ. ಹೆಸರೇ ಹೇಳುವಂತೆ ಇದೊಂದು ಲವ್ಸ್ಟೋರಿಯಾಗಿರಲಿದೆ ಎನ್ನುವ ಸುದ್ದಿ ಇದೆಯಾದರೂ ಹೆಚ್ಚಿನ ಮಾಹಿತಿ ಹೊರಬಿದ್ದಿಲ್ಲ. ಕಾಲಿವುಡ್ ನಟ ಧನುಷ್ ಅವರ 51ನೇ ಸಿನಿಮಾ D51 ಗೆ ಹೀರೋಯಿನ್ ಆಗಿ ಕೂಡ ರಶ್ಮಿಕಾ ಮಂದಣ್ಣ ಆಯ್ಕೆಯಾಗಿದ್ದಾರೆ. ಇದು ನಟಿಯ ಮೂರನೇ ತಮಿಳು ಸಿನಿಮಾ. ಇದಕ್ಕೂ ಮೊದಲು ಸುಲ್ತಾನ್ ಹಾಗೂ ವಾರಿಸು ಮೂವಿಯಲ್ಲಿ ಈ ಕಿರಿಕ್ ಪಾರ್ಟಿ ಬೆಡಗಿ ನಟಿಸಿದ್ದರು.ಛಾವಾ ಸಿನಿಮಾದ ಶೂಟಿಂಗನ್ನು ರಶ್ಮಿಕಾ ಈಗಾಗಲೇ ಮುಗಿಸಿದ್ದಾರೆ.
ರಶ್ಮಿಕಾ ಮಂದಣ್ಣ ಅವರ ಇನ್ನೊಂದು ಬಹುನಿರೀಕ್ಷಿತ ಸಿನಿಮಾ ರೈನ್ಬೋ, ಇದು ತೆಲುಗು ಸಿನಿಮಾ ಆಗಿದ್ದು ಈ ಮೂವಿ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಇದರ ಮಹೂರ್ತದ ಫೋಟೋಗಳು ಸಾಕಷ್ಟು ವೈರಲ್ ಆಗಿದ್ದವು. ರಶ್ಮಿಕಾ ಅವರ ಇನ್ನೊಂದು ಸಿನಿಮಾ ಅನಿಮಲ್ ಪಾರ್ಕ್. ರಣಬೀರ್ ಕಪೂರ್ ಜೊತೆಗಿನ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಸೀಕ್ವೆಲ್ನಲ್ಲಿಯೂ ರಶ್ಮಿಕಾ ನಟಿಸಲಿದ್ದಾರೆ. ಒಟ್ಟಾರೆಯಾಗಿ ಈ ವರ್ಷ ಕೊಡಗಿನ ಬೆಡಗಿ ರಶ್ಮಿಕಾಳ ಪಾಲಿಗೆ ಅದೃಷ್ಟದ ವರ್ಷವೆಂದೇ ಹೇಳಬಹುದಾಗಿದೆ.