Connect with us

    FILM

    ವಿಜಯ್ ದೇವರಕೊಂಡಗೆ ರಶ್ಮಿಕಾ ಮಂದಣ್ಣ ಸಿಕ್ರೇಟ್ ಮೇಸೆಜ್…

    ಬೆಂಗಳೂರು ಡಿಸೆಂಬರ್ 19: ದಕ್ಷಿಣ ಭಾರತದ ಸಿನೆಮಾ ಇಂಡಸ್ಟ್ರೀಯಲ್ಲಿ ಸದ್ಯ ಸೂಪರ್ ಹಿಟ್ ಜೋಡಿಗಳಲ್ಲೊಂದಾದ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ನಡುವಿನ ಗಾಸಿಫ್ ಸುದ್ದಿಗಳಿಗೆ ಇದೀಗ ಮತ್ತೊಂದು ಸುದ್ದಿ ಸೇರಿಕೊಂಡಿದೆ. ರಶ್ಮಿಕಾ ಮಂದಣ್ಣ ತನ್ನ ಬಾಯ್‌ಫ್ರೆಂಡ್ ವಿಜಯ್‌ಗೆ ಸೀಕ್ರೆಟ್ ಮೆಸೇಜ್ ತಲುಪಿಸಿದು, ಇದೀಗ ಪೋಸ್ಟ್ ವೈರಲ್ ಆಗಿದೆ.


    ಕೊಡಗಿನ ಬೆಡಗಿ ತನ್ನ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಪ್ರೀತಿ ತುಂಬಿದ ಸಾಲುಗಳನ್ನು ಬರೆದು ಪೋಸ್ಟ್ ಮಾಡಿದ್ದರು. ಅದರಲ್ಲಿ ನಾನು ನಿಮಗೆ ಹೇಳಲು ಒಂದು ವಿಷಯ ಬಯಸುತ್ತೇನೆ. ನನ್ನ ಜೀವನದಲ್ಲಿ ಬಂದಿದ್ದಕ್ಕಾಗಿ ಧನ್ಯವಾದಗಳು ಎಂದು ಬರೆದು ಹೃದಯದ ಇಮೋಜಿ ಹಾಕಿದ್ದರು. ರಶ್ಮಿಕಾ(Rashmika Mandanna) ಯಾರ ಹೆಸರನ್ನು ಪೋಸ್ಟ್‌ನಲ್ಲಿ ಟ್ಯಾಗ್ ಮಾಡಿಲ್ಲ. ಆದರೆ ವಿಜಯ್ ದೇವರಕೊಂಡ ಕುರಿತು ರಶ್ಮಿಕಾ ಈ ಪೋಸ್ಟ್ ಮಾಡಿದ್ದಾರೆ ಎಂದು ಇದೀಗ ಚರ್ಚೆಗೆ ಗ್ರಾಸವಾಗಿದೆ.


    ಇತ್ತೀಚೆಗೆ ತೆರೆಕಂಡ ‘ಖುಷಿ’ ಸಿನಿಮಾದ ಪ್ರಚಾರದ ವೇಳೆ ವಿಜಯ್ ದೇವರಕೊಂಡ ಸದ್ಯದಲ್ಲೇ ಮದುವೆ ಆಗೋದಾಗಿ ಗುಡ್ ನ್ಯೂಸ್ ಕೊಟ್ಟಿದ್ದರು. ಆ ಹುಡುಗಿ ರಶ್ಮಿಕಾ ಮಂದಣ್ಣ ಎಂದೇ ಸುದ್ದಿಯಾಗಿತ್ತು. ಇದುವರೆಗೂ ಈ ಬಗ್ಗೆ ಯಾವುದೇ ಬಿಟ್ಟು ಕೊಟ್ಟಿಲ್ಲ. ವಿಜಯ್ ಕಡೆಯಿಂದ ಅಧಿಕೃತ ಅಪ್‌ಡೇಟ್ ಸಿಗುವವರೆಗೂ ಕಾದುನೋಡಬೇಕಿದೆ.

    Share Information
    Advertisement
    Click to comment

    You must be logged in to post a comment Login

    Leave a Reply