Connect with us

    FILM

    ಅನಿಮಲ್ ಚಿತ್ರದ ಹಾಡಿನಲ್ಲಿ ರಶ್ಮಿಕಾ ಮಂದಣ್ಣ ಲಿಪ್ ಲಾಕ್….!!

    ಮುಂಬೈ ಅಕ್ಟೋಬರ್ 11: ರಣಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ನಟಿಸಿರುವ ಹಿಂದಿಯ ಅನಿಮಲ್ ಚಿತ್ರದ ಹಾಡೊಂದು ಬಿಡುಗಡೆಯಾಗಿದೆ. ಹಾಡಿನಲ್ಲಿ ರಣಬೀರ್ ಕಪೂರ್ ಮತ್ತು ರಶ್ಮಿಕಾ ಕೆಮೆಸ್ಟ್ರೀ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.


    ಈ ಲಿಪ್ ಕಿಸ್ ಪೋಸ್ಟರ್ ವಾಸ್ತವವಾಗಿ ಅನಿಮಲ್ ಹಾಡು ‘ಹುವಾ ಮೈನ್’ ನಿಂದ ಬಂದಿದೆ. ಇದು ಅಕ್ಟೋಬರ್ 11ರಂದು ಬಿಡುಗಡೆಯಾಗಲಿದೆ. ಅದೇ ಹಾಡಿನ ಪ್ರಚಾರಕ್ಕಾಗಿ ನಿರ್ಮಾಪಕರು ಈ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ವಿಮಾನದ ಕಾಕ್‌ಪಿಟ್‌ನಲ್ಲಿದ್ದು ಪರಸ್ಪರ ಲಿಪ್ ಕಿಸ್ ಮಾಡುತ್ತಿದ್ದಾರೆ. ಹಾಡಿನಲ್ಲಿ ರಣಬೀರ್‌–ರಶ್ಮಿಕಾ ಲಿಪ್‌ ಲಾಕ್‌ ಮಾಡುವ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಪದೇ ಪದೇ ಲಿಪ್‌ ಲಾಕ್‌ ಮಾಡುವುದು ಹಾಡಿನಲ್ಲಿ ಸೆರೆಯಾಗಿದೆ.


    ಈ ಲಿಪ್ ಕಿಸ್ ಪೋಸ್ಟರ್ ಗೆ ಅಭಿಮಾನಿಗಳು ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಈ ಹಿಂದೆ ತೆರೆಯ ಮೇಲೆ ಚುಂಬನದ ದೃಶ್ಯಗಳನ್ನು ಮಾಡಿದ್ದಾರೆ.

    ಆದರೆ ಇದು ರಣಬೀರ್ ಕಪೂರ್ ಜೊತೆಗಿನ ಮೊದಲ ಚಿತ್ರ. ‘ಅನಿಮಲ್’ ಚಿತ್ರದ ಟ್ರೇಲರ್ ನೋಡಿದ ದಿನದಿಂದಲೂ ಅಭಿಮಾನಿಗಳು ರಣಬೀರ್ ಮತ್ತು ರಶ್ಮಿಕಾ ಮಂದಣ್ಣ ಅವರ ಕೆಮಿಸ್ಟ್ರಿಯನ್ನು ಕೊಂಡಾಡುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply