Connect with us

    DAKSHINA KANNADA

    ಬೆಡ್ ಶೀಟ್ ಮಾರುವ ನೆಪದಲ್ಲಿ ಮಹಿಳೆ ಮಾನಭಂಗಕ್ಕೆ ಯತ್ನ…ಸ್ಥಳೀಯರಿಂದ ಬಿತ್ತು ಧರ್ಮದೇಟು…!!

    ಕಡಬ ಅಕ್ಟೋಬರ್ 21: ಬೆಡ್ ಶೀಟ್ ಮಾರುವ ನೆಪದಲ್ಲಿ ಬಂದು ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ್ದ ಇಬ್ಬರು ಯುವಕರಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ದ.ಕ ಜಿಲ್ಲೆಯ ಕಡಬ ತಾಲೂಕಿನ ಕಾಣಿಯೂರು ದೋಲ್ಪಾಡಿಯಲ್ಲಿ ನಡೆದಿದೆ.


    ಪೊಳಲಿ ನಿವಾಸಿಗಳಾದ ರಮೀಶುದ್ಧೀನ್ (25) ಹಾಗೂ ರಫೀಕ್ (30) ಅತ್ಯಾಚಾರಕ್ಕೆ ‌ಯತ್ನಿಸಿದವರು. ಕಂಬಳಿ ಮಾರುವ ನೆಪದಲ್ಲಿ ಕಾರಿನಲ್ಲಿ ಮನೆಯಂಗಳಕ್ಕೆ ಬಂದಿದ್ದ ಆರೋಪಿಗಳು, ಮನೆಯಲ್ಲಿ ಮಹಿಳೆ ಒಬ್ಬರೇ ಇದ್ದುದನ್ನ ಗಮನಿಸಿ ಮನೆಗೆ ಹೋಗಿದ್ದಾರೆ.

    ಈ ವೇಳೆ ಬೆಡ್ ಶೀಟ್‌ಗಳನ್ನು ಮಹಿಳೆ ನೋಡುತ್ತಿದ್ದಂತೆ ಚಿನ್ನದ ಸರ ಎಗರಿಸಲು ಯತ್ನಿಸಿದ್ದಾರೆ‌. ಅಲ್ಲದೇ ‌ಮಹಿಳೆಯ ಕೈ ಹಿಡಿದೆಳೆದು ಮಾನಭಂಗಕ್ಕೆ ಯತ್ನಿಸಿದ್ದಾಗಿ ಮಹಿಳೆ ದೂರಿದ್ದಾರೆ. ಈ ವೇಳೆ ಮಹಿಳೆ ಬೊಬ್ಬೆ ಹೊಡೆದಾಗ ಕಾರಿನಲ್ಲಿ ಪರಾರಿಯಾದ ಆರೋಪಿಗಳು, ವೇಗವಾಗಿ ಪರಾರಿಯಾಗುವ ವೇಳೆ ಕಾರು ಪಲ್ಟಿಯಾಗಿ ಅಪಘಾತ ನಡೆದಿದೆ.

    ಆರೋಪಿಗಳನ್ನ ಹಿಂಬಾಲಿಸುತ್ತಿದ್ದ ಸ್ಥಳೀಯರು ಪಲ್ಟಿಯಾದ ಕಾರಿನಿಂದ ಹೊರಗೆಳೆದು ಆರೋಪಿಗಳಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸದ್ಯ ಸಾಮಾಜಿಕ ತಾಣಗಳಲ್ಲಿ ಥಳಿತದ ವಿಡಿಯೋ ವೈರಲ್ ಆಗಿದೆ‌. ಮಹಿಳೆ ನೀಡಿದ ದೂರಿನಂತೆ ಆರೋಪಿಗಳ ವಿರುದ್ದ ಅತ್ಯಾಚಾರ ಯತ್ನ ಕೇಸ್ ದಾಖಲಾಗಿದೆ.‌

    Share Information
    Advertisement
    Click to comment

    You must be logged in to post a comment Login

    Leave a Reply