FILM
ಉಡುಪಿ ನನ್ನ ಜನ್ಮ ಸ್ಥಳ – ಈ ವಿಚಾರದಲ್ಲಿ ಬಕೆಟ್ ಅಲ್ಲ, ಟ್ಯಾಂಕರ್ ಹಿಡಿಯುತ್ತೇನೆ ರಕ್ಷಿತ್ ಶೆಟ್ಟಿ
ಮಂಗಳೂರು ಮಾರ್ಚ್ 11: ಮಿಥುನ್ ರೈ ವಿರುದ್ದ ಶ್ರೀಕೃಷ್ಣ ಮಠಕ್ಕೆ ಸಂಬಂಧಿಸಿದ ವಿವಾದಕ್ಕೆ ಟ್ವೀಟ್ ಮೂಲಕ ನಟ ರಕ್ಷಿತ್ ಶೆಟ್ಟಿ ಟಾಂಗ್ ನೀಡಿದ್ದರು. ಆದರೆ ಈಗ ಈ ಟ್ವೀಟ್ ಗೆ ಪರ ಮತ್ತು ವಿರೋಧ ಹುಟ್ಟಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇತ್ತೀಚೆಗೆ ಮೂಡುಬಿದಿರೆ ಪುತ್ತಿಗೆ ಮಸೀದಿಯೊಂದರ ಸಮಾರಂಭದಲ್ಲಿ `ಉಡುಪಿ ಕೃಷ್ಣ ಮಠಕ್ಕೆ ಜಾಗ ನೀಡಿದ್ದು ಮುಸ್ಲಿಂ ರಾಜರು’ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ, ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಈ ಕುರಿತು ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಮಾತನಾಡಿದ್ದಾರೆ. ದೇವಾಲಯಗಳ ನಗರಿ ಉಡುಪಿಗೆ ಸಾವಿರಕ್ಕೂ ಹೆಚ್ಚು ವರ್ಷದ ಬರೆದಿಟ್ಟಿರುವ ಇತಿಹಾಸ ಇದೆ. ನಿಮಗೆ ಈ ಬಗ್ಗೆ ಗೊತ್ತಿರದಿದ್ದರೇ ಏಕೆ ಸಾರ್ವಜನಿಕ ಸಮಾರಂಭಗಳಲ್ಲಿ ನಿಮ್ಮ ಅಜ್ಞಾನ ಪ್ರದರ್ಶಿಸುತ್ತೀರಿ? ಎಂದು ಪರೋಕ್ಷವಾಗಿ ಮಿಥುನ್ ರೈ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಬಕೆಟ್ ಹಿಡಿಯಬೇಡಿ ಎಂದು ಪ್ರದೀಪ್ ಶೆಟ್ಟಿ ಅವರು ರಕ್ಷಿತ್ ಶೆಟ್ಟಿ ಅವರಿಗೆ ಹೇಳಿದ್ದಕ್ಕೆ, ‘ಈ ವಿಚಾರದಲ್ಲಿ ಬಕೆಟ್ ಅಲ್ಲ, ಟ್ಯಾಂಕರ್ ಹಿಡಿಯುತ್ತೇನೆ. ಉಡುಪಿ ನನ್ನ ಜನ್ಮಸ್ಥಳ. ಮುಸ್ಲಿಂ ರಾಜ ಯಾವ ಜಾಗವನ್ನು ಮಠಕ್ಕೆ ಕೊಟ್ಟರೊ ಗೊತ್ತಿಲ್ಲ. ಆದರೆ, ಖಂಡಿತವಾಗಿಯೂ ರಥ ಬೀದಿಯ ಜಾಗ ಕೊಟ್ಟಿಲ್ಲ. ಅನಂತೇಶ್ವರ ಮಂದಿರ ಕೃಷ್ಣ ಮಠ ಹಾಗೂ ಚಂದ್ರಮೌಳೇಶ್ವರ ಮಂದಿರಕ್ಕಿಂತ ಹಳೆಯದು’ ಎಂದಿದ್ದಾರೆ.