Connect with us

    LATEST NEWS

    ಕೃಷ್ಣ ಮಠ ವಿವಾದ – ನಾನ್ ಸೆನ್ಸ್ ರೀತಿಯಲ್ಲಿ ಮಾತಾನಾಡೋದು ಯಾಕೆ ಎಂದ ನಟ ರಕ್ಷಿತ್ ಶೆಟ್ಟಿ

    ಉಡುಪಿ ಮಾರ್ಚ್ 11: ಉಡುಪಿ ಮಠಕ್ಕ ಜಾಗ ಕೊಟ್ಟಿದ್ದು ಮುಸ್ಲಿಂ ದೊರೆಗಳು ಎಂದು ಹೇಳಿ ವಿವಾದ ಉಂಟು ಮಾಡಿದ್ದ ಕಾಂಗ್ರೇಸ್ ಯುವ ಮುಖಂಡ ಮಿಥುನ್ ರೈ ವಿರುದ್ದ ಇದೀಗ ನಟ ರಕ್ಷಿತ್ ಶೆಟ್ಟಿ ಕಿಡಿಕಾರಿದ್ದಾರೆ.


    ಸೋಷಿಯಲ್ ಮೀಡಿಯಾದ ತಮ್ಮ ಖಾತೆಯಲ್ಲಿ ರಕ್ಷಿತ್ ಶೆಟ್ಟಿ ಈ ವಿವಾದದ ಕುರಿತಂತೆ ಬರೆದುಕೊಂಡಿದ್ದು, ಮಿಥುನ್ ರೈ ಹೆಸರನ್ನು ಬಳಸದೇ ತರಾಟೆಗೆ ತಗೆದುಕೊಂಡಿದ್ದಾರೆ. ‘ಉಡುಪಿ ದೇವಸ್ಥಾನಕ್ಕೆ ಸಾವಿರಾರು ವರ್ಷದ ಇತಿಹಾಸ ಇದೆ. ಮಾಹಿತಿ ಗೊತ್ತಿಲ್ಲದೇ ಸಾರ್ವಜನಿಕವಾಗಿ ನಾನ್ ಸೆನ್ಸ್ ರೀತಿಯಲ್ಲಿ ಮಾತಾನಾಡೋದು ಯಾಕೆ?’ ಎಂದು ಪ್ರಶ್ನೆ ಮಾಡಿದ್ದಾರೆ. ಅವರು ಮಿಥುನ್ ರೈ ಹೆಸರು ಬಳಸದೇ ಇದ್ದರೂ, ಇವರಿಗೆ ಕೊಟ್ಟ ಪ್ರತಿಕ್ರಿಯೆ ಎನ್ನುವುದು ಸ್ಪಷ್ಟವಾಗುತ್ತದೆ.


    ಸಾಮಾನ್ಯವಾಗಿ ರಾಜಕೀಯ ವ್ಯಕ್ತಿಗಳ ಹೇಳಿಕೆಗಳಿಗೆ ರಕ್ಷಿತ್ ಶೆಟ್ಟಿ ಈವರೆಗೂ ಯಾವುದೇ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಸ್ವತಃ ತಮ್ಮ ಮೇಲೆಯೇ ಹಲವರು ನೆಗೆಟಿವ್ ಕಾಮೆಂಟ್ ಮಾಡಿದಾಗಲೂ ರಕ್ಷಿತ್ ಮೌನವಹಿಸಿದ್ದರು. ಆದರೆ, ಉಡುಪಿ ಮಠಕ್ಕೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯಿಸಿದ್ದಾರೆ. ರಕ್ಷಿತ್ ಪೋಸ್ಟ್ ಗೆ ಹಲವರು ಹಲವು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply