LATEST NEWS
ಕಂಠಪೂರ್ತಿ ಮದ್ಯಸೇವಿಸಿ ಮದುವೆ ಮಂಟಪಕ್ಕೆ ಬಂದ ವರ! ಆಮೇಲೆ ಏನಾಯ್ತು ಗೊತ್ತಾ?

ಗುವಾಹಟಿ, ಮಾರ್ಚ್ 11: ಇತ್ತೀಚಿಗಿನ ಮದುವೆ ಸಂದರ್ಭದಲ್ಲಿ ವರ ಮದ್ಯಪಾನ ಮಾಡುವುದು ಹಾಗೂ ಆತನ ಸ್ನೇಹಿತರು ಮದ್ಯಪಾನ ಮಾಡುವುದು ಸಾಮಾನ್ಯ ಆದರೆ ಕೆಲವು ಭಾರಿ ಆಮೇಲೆ ಪೇಚಿಗೆ ಸಿಲುಕುವುದುಂಟು.
ಅಸ್ಸಾಂನ ಮದುವೆಯೊಂದರಲ್ಲಿ ವರ ಹಾಗೂ ಆತನ ಕುಟುಂಬದ ಶೇ 95 ರಷ್ಟು ಜನ ಕಂಠಪೂರ್ತಿ ಕುಡಿದು ವಧುವಿನ ಮನೆಗೆ ಬಂದಿದ್ದಾರೆ. ಈ ಘಟನೆ ಅಸ್ಸಾಂನ ನಲಭಾರಿ ಜಿಲ್ಲೆಯಲ್ಲಿ ನಡೆದಿದ್ದು, ಕುಡುಕ ವರ ಹಾಗೂ ಅವನ ಕುಟುಂಬದವರನ್ನು ನೋಡಿ ಯುವತಿ ಮದುವೆ ರದ್ದು ಮಾಡಿದ್ದಾರೆ.

Video: "Drunk" Groom Sleeps At His Own Wedding. This Happened Next https://t.co/e29q2ZgBBm pic.twitter.com/LEZgRtXbJc
— NDTV (@ndtv) March 11, 2023
ಇನ್ನೊಂದು ವಿಶೇಷವೆಂದರೆ ಕಲ್ಯಾಣಮಂಟಪಕ್ಕೆ ತಯಾರಾಗಿ ಬಂದಿದ್ದ ವರ ಅಲ್ಲೂ ಕೂಡ ಮತ್ತಿನಲ್ಲಿ ಇದ್ದ. ಈ ವೇಳೆ ಸ್ನೇಹಿತರು ಪುರೋಹಿತ ಆತನನ್ನು ಎಚ್ಚರಿಸಲು ಪ್ರಯತ್ನಿಸಿದರೇ ಆತ ಮಾತ್ರ ಅಲ್ಲಿಯೇ ಮಲಗಿದ್ದಾನೆ. ಸದ್ಯ ಈ ಮದುವೆ ರದ್ದಾಗಿದ್ದು ಮದುವೆಗಾಗಿ ಮಾಡಿದ್ದ ವೆಚ್ಚವನ್ನು ಕೊಡಿಸಬೇಕು ಎಂದು ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತು ಎನ್‌ಡಿಟಿವಿ ಸುದ್ದಿ ಮಾಡಿದೆ.