Connect with us

KARNATAKA

ಟ್ರೈನ್ ಅಡಿ ಬಿಳುತ್ತಿದ್ದ ಪ್ರಯಾಣಿಕನನ್ನು ರಕ್ಷಣೆ ಮಾಡಿದ ರೈಲ್ವೆ ಸಿಬ್ಬಂದಿ….!!

ಕಾರವಾರ: ರೈಲ್ವೆ ಬೋಗಿಯಿಂದ ಕೆಳಗೆ ಬಿದ್ದ ಅಪಾಯಕ್ಕೆ ಸಿಲುಕ್ಕಿದ್ದ ಪ್ರಯಾಣಿಕನನ್ನು ರೈಲ್ವೆ ಸಿಬ್ಬಂದಿಯೊಬ್ಬರು ರಕ್ಷಿಸಿದ ಘಟನೆ ಕಾರವಾರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಬೆಂಗಳೂರು ಮೂಲಕ ಕೇಂದ್ರ ರಕ್ಷಣಾ ಇಲಾಖೆಯ ಅಧಿಕಾರಿ ಬಿ.ಎಂ.ದೇಸಾಯಿ (59) ಎಂಬವರು ಪ್ಲಾಟ್‍ಫಾರಂ ಒಂದರಲ್ಲಿ ಲಗೇಜು ತೆಗೆದುಕೊಳ್ಳಲು ಟ್ರೈನ್‍ನಿಂದ ದೇಸಾಯಿ ಅವರು ಇಳಿಯುವಾಗ ಟ್ರೈನ್ ಹೊರಟಿದ್ದರಿಂದ ಆಯಾತಪ್ಪಿ ಬಿದ್ದಿದ್ದರು. ಈ ವೇಳೆ ಕರ್ತವ್ಯದಲ್ಲಿದ್ದ ರೈಲ್ವೆ ಸಿಬ್ಬಂದಿ ನರೇಶ್ ಎಂಬವರ ಸಮಯ ಪ್ರಜ್ಞೆಯಿಂದ ಇವರನ್ನು ರಕ್ಷಣೆ ಮಾಡಿದ್ದಾರೆ.
ಚಿಕ್ಕಪುಟ್ಟ ಗಾಯವಾಗಿದ್ದ ಅವರನ್ನು ಪ್ರಥಮ ಚಿಕಿತ್ಸೆ ಕೊಡಿಸಿ ರೈಲ್ವೆ ಇನ್ಸ್‍ಪೆಕ್ಟರ್ ನೀಲೇಶ್ ದುಬೆ ಅವರ ಸಹಾಯದಿಂದ ಮತ್ತೊಂದು ಟ್ರೈನ್ ಮೂಲಕ ಸುರಕ್ಷಿತವಾಗಿ ಬೆಂಗಳೂರಿಗೆ ರೈಲ್ವೆ ಇಲಾಖೆ ಸಿಬ್ಬಂದಿ ಕಳುಹಿಸಿಕೊಟ್ಟಿದ್ದಾರೆ.

Advertisement
Click to comment

You must be logged in to post a comment Login

Leave a Reply