Connect with us

    DAKSHINA KANNADA

    ಪುತ್ತೂರು – ಸರಕಾರಿ ಆಸ್ಪತ್ರೆ ಕಟ್ಟಡದ ಮೇಲೆ ಬಿದ್ದ ಬೃಹತ್ ಗಾತ್ರದ ಮರ

    ಪುತ್ತೂರು ಅಗಸ್ಟ್ 01: ಸರಕಾರಿ ಆಸ್ಪತ್ರೆ ಕಟ್ಟಡದ ಮೇಲೆ ಬೃಹತ್ ಮರವೊಂದು ಬುಡಸಮೇತ ಬಿದ್ದ ಘಟನೆ ಪುತ್ತೂರಿನಲ್ಲಿ ನಡೆದಿದ್ದು, ಘಟನೆ ನಡೆಯುವ ವೇಳೆ ಜನ ಸಂಚಾರ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ.


    ಪುತ್ತೂರು ನಗರದ ಮಧ್ಯಭಾಗದಲ್ಲಿರುವ ಸರಕಾರಿ ಆಸ್ಪತ್ರೆ ಬಳಿ ಇರುವ ಮರ ಇದಾಗಿದ್ದು, ಆಸ್ಪತ್ರೆ ಆಡಳಿತ ಕಛೇರಿ, ಸೆಕ್ಯುರಿಟಿ ರೂಂ ಇರುವ ಕಟ್ಟಡ ಮೇಲೆ ಬುಡ ಸಮೇತ ನೆಲಕ್ಕೆ ಉರುಳಿದೆ. ಈ ಘಟನೆ ನಡೆಯುವ ವೇಳೆ ಜನ ಸಂಚಾರ ಇಲ್ಲದ ಕಾರಣ ಭಾರೀ ಅನಾಹುತವೊಂದು ತಪ್ಪಿದೆ, ಮರ ಕೊಂಚ ವಾಲಿ ಇನ್ನೊಂದು ಭಾಗಕ್ಕೆ ಬಿದ್ದಿದ್ದರೆ ನಡೆಯುತ್ತಿತ್ತು ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಆ ಭಾಗದಲ್ಲಿ ಡಯಾಲಿಸೀಸ್ ಘಟಕದಲ್ಲಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು.


    ಇನ್ನು ಮರ ಬಿದ್ದು ಗಂಟೆ ಕಳೆದರೂ ನಡೆಯದ ಮರ ತೆರವು ಮಾಡಲು ಸ್ಥಳೀಯ ಆಡಳಿತ ಮುಂದಾಗದ ಕಾರಣ ಆಸ್ಪತ್ರೆಗೆ ಬರುವ ತುರ್ತು ವಾಹನ ಸೇವೆಗೆ ಅಡ್ಡಿಯುಂಟಾಗಿತ್ತು. ಬಳಿಕ ಪರ್ಯಾಯ ಮಾರ್ಗದ ಮೂಲಕ ಅಂಬ್ಯುಲೆನ್ಸ್ ಮತ್ತು ರೋಗಿಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.

    Share Information
    Advertisement
    Click to comment

    You must be logged in to post a comment Login

    Leave a Reply