Connect with us

    DAKSHINA KANNADA

    ಪುತ್ತೂರು ಅಭ್ಯರ್ಥಿ ಆಶಾ ತಿಮ್ಮಪ್ಪರ ಆಯ್ಕೆ ಒಂದಿಬ್ಬರ ತೀರ್ಮಾನವಲ್ಲ: ಅಣ್ಣಾಮಲೈ

    ಪುತ್ತೂರು, ಎಪ್ರಿಲ್ 29: ರಾಜ್ಯಕ್ಕೆ ಪ್ರಿಯಾಂಕ ಗಾಂಧಿಯವರನ್ನು ತರಿಸಿ ದೋಸೆ ಮಾಡಿಸಿದಲ್ಲಿ ಜನ ಮತ ಹಾಕಲ್ಲ ಎಂದು ಕಾಂಗ್ರೆಸ್ ವಿರುದ್ಧ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ವ್ಯಂಗ್ಯವಾಡಿದ್ದಾರೆ.

    ಪುತ್ತೂರಿನಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಅವರು ಕಾಂಗ್ರೇಸ್ ಪಕ್ಷ 1960 ರ ಹಳೆ ಟೇಪ್ ರೆಕಾರ್ಡಿಂಗ್ ಇದ್ದಹಾಗೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದಲ್ಲಿ ಈ ಕಾನೂನು ವಾಪಾಸು ಪಡೀತೆನೆ, ಆ ಕಾನೂನು ಮಾಡಲು ಬಿಡೋದಿಲ್ಲ ಎನ್ನುತ್ತಿದೆ. ಇದೇ ಕಾರಣಕ್ಕೆ ಗೃಹಮಂತ್ರಿ ಅಮಿತ್ ಶಾ ಕಾಂಗ್ರೇಸ್ ಪಕ್ಷವನ್ನು ರಿವರ್ಸ್ ಗೇರ್ ಹೋಲಿಸಿದ್ದು, ಕಾಂಗ್ರೆಸ್ ರಿವರ್ಸ್ ಗೇರ್ ಹಾಕಿ ಓಡುತ್ತಿದೆ.

    ಆದರೆ ಬಿಜೆಪಿ ಡಬಲ್ ಇಂಜಿನ್ ಮೂಲಕ ಮುಂದೆ ಓಡುತ್ತಿದೆ. ಇದೇ ಕಾಂಗ್ರೆಸ್ ಮತ್ತು ಬಿಜೆಪಿಗೆ ಇರುವ ವೆತ್ಯಾಸವಾಗಿದೆ ಎಂದ ಅವರು ಪುತ್ತೂರಿನಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡರ ಗೆಲುವು ನಿಶ್ಚಿತ. ಸಂಘಟನೆಯಲ್ಲಿ ಕೆಲಸ ಮಾಡಿದ ಆಧಾರದಲ್ಲಿ ಪಕ್ಷ ಈ ಬಾರಿ ಆಶಾ ತಿಮ್ಮಪ್ಪ ಗೌಡ ಅವರನ್ನು ಈ ಬಾರಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ. ಬಿಜೆಪಿಯಲ್ಲಿ ಕಾಂಗ್ರೆಸ್ ಪಕ್ಷದಂತೆ ಕೇವಲ ಇಬ್ಬರು ಕುಳಿತು ಅಭ್ಯರ್ಥಿಯನ್ನು ಆಯ್ಕೆ ಮಾಡುವ ವ್ಯವಸ್ಥೆಯಿಲ್ಲ.

    ತಳಮಟ್ಟದ ಶಕ್ತಿಕೇಂದ್ರ, ಜಿಲ್ಲಾ ಕೇಂದ್ರ, ರಾಜ್ಯ ಚುನಾವಣಾ ಸಮಿತಿ, ಕೇಂದ್ರ ಚುನಾವಣಾ ಸಮಿತಿ,ಪಾರ್ಲಿಮೆಂಟರಿ ಸಮಿತಿ ಚರ್ಚೆ ನಡೆಸಿದ ಬಳಿಕ ಪ್ರಧಾನಿ ಮೋದಿ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತಗೊಳಿಸುತ್ತಾರೆ ಎಂದರು. ಗೆಲ್ಲುವ ಪಕ್ಷದಲ್ಲಿ ಆಕಾಂಕ್ಷಿಗಳು ಇರೋದು ಸಾಮಾನ್ಯವಾಗಿದ್ದು, ಪುತ್ತೂರಿನಲ್ಲೂ ಈ ಬಾರಿ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ. ಪಕ್ಷ ಎಲ್ಲರಿಗೂ ಸ್ಥಾನಮಾನವನ್ನು ಕೊಡುತ್ತೆ, ಆದರೆ ಸ್ವಲ್ಪ ಸಮಾಧಾನದಲ್ಲಿ ಕಾಯಬೇಕು ಎಂದ ಅವರು ಯುವಜನತೆಗೆ ಬಿಜೆಪಿ ಖಂಡಿತವಾಗಿಯೂ ಅವಕಾಶ ನೀಡುತ್ತದೆ ಎಂದರು.

    ಪುತ್ತೂರು ಶಾಸಕ‌ ಸಂಜೀವ ಮಠಂದೂರು ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಒಳ್ಳೇ ಕೆಲಸ ಮಾಡಿದವರು ಒಂದೇ ಸ್ಥಾನದಲ್ಲಿ ಪರ್ಮನೆಂಟ್ ಎನ್ನುವ ವ್ಯವಸ್ಥೆ ಪಕ್ಷದಲ್ಲಿಲ್ಲ. ಇಂದು ಒಂದು ಸ್ಥಾನವಾದರೆ, ನಾಳೆ ಇನ್ನೊಂದು ಸ್ಥಾನಕ್ಕೆ ಹೋಗೋದು ಪಕ್ಷದ ವ್ಯವಸ್ಥೆಯೊಳಗಿದೆ ಎಂದ ಅವರು ಸಂಜೀವ ಮಠಂದೂರಿಗೆ‌ ಪಕ್ಷ‌ ಮುಂದಿನದಿನಗಳಲ್ಲಿ ಉತ್ತಮ ಸ್ಥಾನವನ್ನು ನೀಡಬಹುದು ಎಂದರು.

    Share Information
    Advertisement
    Click to comment

    You must be logged in to post a comment Login

    Leave a Reply