LATEST NEWS
ಉಡುಪಿ – ಕಾಂಗ್ರೇಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ 33.64 ಕೋಟಿ ಆಸ್ತಿ, ಕಿರಣ್ ಕೊಡ್ಗಿ 19 ಕೋಟಿ ಆಸ್ತಿ
ಉಡುಪಿ ಎಪ್ರಿಲ್ 18: ವಿಧಾನಸಭಾ ಚುನಾವಣೆ ಹಿನ್ನಲೆ ಅಭ್ಯರ್ಥಿಗಳು ಈಗಾಗಲೇ ನಾಮಪತ್ರ ಸಲ್ಲಿಸಿದ್ದು, ಉಡುಪಿಯಲ್ಲಿಯೂ ಅಭ್ಯರ್ಥಿಗಳು ಕೋಟಿ ಬೆಲೆಯ ಆಸ್ತಿಯನ್ನು ಹೊಂದಿದ್ದಾರೆ. ಉಡುಪಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಪ್ರಸಾದ್‌ರಾಜ್ ಕಾಂಚನ್ ಸಲ್ಲಿಸಿರುವ ನಾಮಪತ್ರದಲ್ಲಿ 33.64 ಕೋ.ರೂ. ಆಸ್ತಿ ಹಾಗೂ 6.16 ಕೋ.ರೂ. ಸಾಲವನ್ನು ತೋರಿಸಿದ್ದಾರೆ.
33.64 ಕೋ.ರೂ. ಆಸ್ತಿಯಲ್ಲಿ 24.08 ಚರಾಸ್ತಿ ಹಾಗೂ 9.56 ಕೋ. ರೂ. ಸ್ಥಿರಾಸ್ತಿ ಸೇರಿದೆ. ಅಪತ್ನಿ ಹೆಸರಿನಲ್ಲಿ 24.68 ಕೋ.ರೂ. ಚರಾಸ್ತಿ, 3.96 ಕೋ.ರೂ. ಸ್ಥಿರಾಸ್ತಿ ಇರುವುದಾಗಿ ತಿಳಿಸಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ ಈಕ್ವಿಟಿ ಷೇರು ಇರುವುದನ್ನು ಉಲ್ಲೇಖೀಸಿದ್ದಾರೆ.
ಇನ್ನು ಕುಂದಾಪುರದ ಬಿಜೆಪಿ ಅಭ್ಯರ್ಥಿ ಕಿರಣ್ ಕೊಡ್ಗಿ ಅವವರು 19 ಕೋಟಿ ಆಸ್ತಿ ಹೊಂದಿದ್ದು, ಕಿರಣ್ ಕೊಡ್ಗಿ ಅವರ ಹೆಸರಿನಲ್ಲಿ 9.32 ಕೋ.ರೂ.ಗಳ ಚರಾಸ್ತಿ, 9.88 ಕೋ.ರೂ. ಕೃಷಿ ಭೂಮಿ, ಕೃಷಿಯೇತರ ಭೂಮಿ ಇತ್ಯಾದಿ ಸೇರಿದ ಸ್ಥಿರಾಸ್ತಿ ಮೌಲ್ಯ, ತನ್ನ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ 1.63 ಕೋ.ರೂ. ಸಾಲ ಇದೆ.
ಪತ್ನಿ ಹೇಮಾ ಕೊಡ್ಗಿ ಹೆಸರಿನಲ್ಲಿ 32.9 ಲಕ್ಷ ರೂ.ಚರಾಸ್ತಿ ಇದೆ. ಪಿತ್ರಾರ್ಜಿತವಾಗಿ ಬಂದ 33 ಎಕ್ರೆ ಕೃಷಿಭೂಮಿ, 1.75ಎಕರೆ ಕೃಷಿಯೇತರ ಭೂಮಿ, ಅಮಾಸೆಬೈಲಿನಲ್ಲಿ ವಾಣಿಜ್ಯ ಕಟ್ಟಡ, ಉಡುಪಿ ಹಾಗೂ ಮಂಗಳೂರಿನಲ್ಲಿ Flat ಹೊಂದಿದ್ದಾರೆ.