Connect with us

    FILM

    ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ನಟಿ ಇಲಿಯಾನಾ ಡಿಕ್ರೂಜ್..!!

    ಮುಂಬೈ ಎಪ್ರಿಲ್ 18: ಖ್ಯಾತ ನಟಿ ಇಲಿಯಾನಾ ಡಿಕ್ರೂಜ್ ತನ್ನ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಾವು ತಾಯಿಯಾಗುತ್ತಿರುವ ಸುದ್ದಿಯನ್ನು ಹಂಚಿಕೊಂಡಿದ್ದಾರೆ.


    ಕಳೆದ ಕೆಲವು ಸಮಯಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದ ಇಲಿಯಾನಾ ಇದೀಗ ಬ್ರೇಕಿಂಗ್ ಸುದ್ದಿ ಕೊಟ್ಟಿದ್ದಾರೆ. ಸಾಮಾಜಿಕ ಜಾಲದಲ್ಲಿ ಪೋಟೋಗಳನ್ನು ಹಂಚಿಕೊಂಡಿರುವ ಅವರು ಹೊಸ ಸಾಹಸ ಆರಂಭವಾಗುತ್ತಿದೆ ಎಂದು ಬರೆದಿದ್ದಾರೆ. ಈ ಮೂಲಕ ತಾವು ತಾಯಿಯಾಗುತ್ತಿರುವುದಾಗಿ ಘೋಷಿಸಿದ್ದಾರೆ. ಆದರೆ ಇಲಿಯಾನಾ ಡಿಕ್ರೂಜ್ ಪತಿ ಬಗ್ಗೆ ಎಲ್ಲಿಯೂ ಮಾಹಿತಿ ಬಿಟ್ಟುಕೊಟ್ಟಿಲ್ಲ.


    ಇಲಿಯಾನಾ ಡಿಕ್ರೂಜ್ ಈ ಹಿಂದೆ ಆಂಡ್ರ್ಯೂ ನೀಬೋನ್ ಅವರೊಂದಿಗೆ ಡೆಟಿಂಗ್ ನಲ್ಲಿದ್ದರು. ಇಬ್ಬರೂ ಮದುವೆಯಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಅಸ್ಪಷ್ಟವಾಗಿದ್ದರೂ ಸಹ, ನಟಿ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ನೀಬೋನ್ ಅನ್ನು “ಅತ್ಯುತ್ತಮ ಗಂಡ” ಎಂದು ಉಲ್ಲೇಖಿಸಿದ್ದಾರೆ. ಇವರಿಬ್ಬರು ಈಗಾಗಲೇ ಮದುವೆಯಾಗಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದಾಗ್ಯೂ, ಈ ಜೋಡಿ ಈಗಾಗಲೇ ಬೇರ್ಪಟ್ಟಿದೆ ಎಂದು ಹೇಳಲಾಗಿದೆ. ಈ ನಡುವೆ ಕತ್ರಿನಾ ಕೈಫ್ ಅವರ ಸಹೋದರರಾಗಿರುವ ಲಂಡನ್‌ನಲ್ಲಿ ವಾಸಿಸುವ ಮಾಡೆಲ್ ಸೆಬಾಸ್ಟಿಯನ್ ಲಾರೆಂಟ್ ಮೈಕೆಲ್‌ ಜೊತೆ ಇಲಿಯಾನಾ ಡೇಟಿಂಗ್ ನಲ್ಲಿದ್ದಾರೆ ಎಂದು ಹೇಳಲಾಗಿತ್ತು.

    Share Information
    Advertisement
    Click to comment

    You must be logged in to post a comment Login

    Leave a Reply