Connect with us

  DAKSHINA KANNADA

  ಹಣ ಸಾಗಾಟದ ಆರೋಪ – ಅಣ್ಣಾಮಲೈ ಬಂದ ಹೆಲಿಕಾಪ್ಟರ್ ಪರಿಶೀಲನೆ ನಡೆಸಿದ ಚುನಾವಣಾ ಅಧಿಕಾರಿಗಳು

  ಪುತ್ತೂರು ಎಪ್ರಿಲ್ 18 : ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಕೆ.ಅಣ್ಣಾಮಲೈ ಸುಳ್ಯಕ್ಕೆ ಭೇಟಿ ನೀಡಿದರು. ಈ ಹೆಲಿಕಾಪ್ಟರ್ ಮೂಲಕ ಸುಳ್ಯ ಕ್ಕೆ ಅಣ್ಣಾಮಲೈ ಆಗಮಿಸಿದ್ದು, ಈ ವೇಳೆ ಅಣ್ಣಾಮಲೈ ಬಂದ ಹೆಲಿಕಾಪ್ಟರ್ ನ್ನು ಚುನಾವಣಾ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.


  ರಾಜ್ಯ ಚುನಾವಣೆ ಉಸ್ತುವಾರಿಯಾಗಿರುವ ಅಣ್ಣಾಮಲೈ ಕರಾವಳಿ ಪ್ರವಾಸದಲ್ಲಿದ್ದು, ಇಂದು ಸುಳ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಭಾಗಿರಥಿ ಮುರುಳ್ಯ ಅವರ ಪರ ನಾಮಪತ್ರ ಸಲ್ಲಿಸಲು ಸುಳ್ಯಕ್ಕೆ ಆಗಮಿಸಿದ್ದಾರೆ.

  ಈ ನಡುವೆ ಕಾಂಗ್ರೇಸ್ ಅಣ್ಣಾಮಲೈ ಹೆಲಿಕಾಪ್ಟರ್ ಮೂಲಕ ಹಣ ಸಾಗಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ಹಿನ್ನಲೆ ಸುಳ್ಯಕ್ಕೆ ಆಗಮಿಸಿದ್ದ ಅಣ್ಣಾಮಲೈ ಹೆಲಿಕಾಪ್ಟರ್ ನ್ನು ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸಿದರು.

  Share Information
  Advertisement
  Click to comment

  You must be logged in to post a comment Login

  Leave a Reply