LATEST NEWS
‘ಲವ್ ಜಿಹಾದ್’ ಮನೆಯವರಿಗೆ ಜ್ಯೂಸ್‌ನಲ್ಲಿ ಮತ್ತು ಬರುವ ಔಷಧ ಕುಡಿಸಿದ್ದ ಪ್ರಿಯಾಂಕ
‘ಲವ್ ಜಿಹಾದ್’ ಮನೆಯವರಿಗೆ ಜ್ಯೂಸ್‌ನಲ್ಲಿ ಮತ್ತು ಬರುವ ಔಷಧ ಕುಡಿಸಿದ್ದ ಪ್ರಿಯಾಂಕ
ಮಂಗಳೂರು, ಡಿಸೆಂಬರ್ 11 : ಮದುವೆ ಮನೆಯಿಂದಲೇ ರಾತೋರಾತ್ರಿ ಪರಾರಿಯಾಗಿದ್ದ ನವ ವಧು ಪ್ರಿಯಾಂಕ ಕುರಿತು ಇದೀಗ ಹೊಸ ಹೊಸ ಮಾಹಿತಿಗಳು ಹೊರ ಬರುತ್ತಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಮೂಡಬಿದರೆಯ ದರೆಗುಡ್ಡೆಯ ಈ ಯುವತಿ ಎಲ್ಲವೂ ಸರಿಯಾಗಿದ್ದಿದ್ದರೆ ಇಂದು ಸೋಮವಾರ ಹಸೆಮಣೆ ಏರಬೇಕಿತ್ತು.
ಈ ಬಗ್ಗೆ ಬೇಕಾದ ಎಲ್ಲಾ ಸಿದ್ದತೆಗಳು ಪೂರ್ಣಗೊಂಡಿದ್ದುವು. ಮನೆಯಲ್ಲಿ ಮದುವೆಯ ಚಪ್ಪರ ಸಿದ್ದವಾಗಿತ್ತು.
ಕುರ್ಚಿಗಳು ಅಂಗಳಕ್ಕೆ ಬಂದು ಬಿದ್ದಿದ್ದುವು. ಕುಟುಂಬಸ್ಥರಿಗೆ, ಹತ್ತಿರದ ಬಂಧುಬಳಗದವರಿಗೆ ಮದುವೆಯ ಆಮಂತ್ರಣ ನೀಡಿಯಾಗಿತ್ತು.
ಆದರೆ ಮೆಹಂದಿ ಕಾರ್ಯಕ್ರಮದ ಹಿಂದಿನ ರಾತ್ರಿ ಪ್ರಿಯಾಂಕ ಇದ್ದಕ್ಕಿದ್ದಂತೆ ಮನೆಯಿಂದ ಪರಾರಿಯಾಗಿದ್ದಾಳೆ.
ತಾನು ಪರಾರಿಯಾಗುವಾಗ ದರೆಗುಡ್ಡೆಯಲ್ಲಿರುವ ತನ್ನ ಮನೆಯಿಂದ 10 ಪವನ್ ಚಿನ್ನಾಭರಣ, ಪಾಸ್ ಪೋರ್ಟ್, ಆಧಾರ್ ಕಾರ್ಡ್,ಇತರ ವಸ್ತುಗಳನ್ನು ತನ್ನೊಂದಿಗೆ ಒಯ್ದಿದ್ದಾಳೆ.
ನವವಧು ಪ್ರಿಯಾಂಕ ಪೂರ್ವಪರ ನೋಡಿದರೆ ಪ್ರಿಯಾಂಕ ಮನೆಯವರು ದರೆಗುಡ್ಡೆಯಲ್ಲಿ ಮನೆಮಾಡುವ ಮೊದಲು ಬಂಟ್ವಾಳದ ಫರಂಗಿಪೇಟೆ ಯಲ್ಲಿ ವಾಸವಿದ್ದರು.
ಆ ಸಂದರ್ಭ ಅನ್ಯಕೋಮಿನ ಹುಡುಗನೊಂದಿಗೆ ಆಕೆಗೆ ಪ್ರೇಮಾಂಕುರವಾಗಿದೆ.
ಈ ವಿಷಯ ಪ್ರಿಯಾಂಕ ಮನೆಯವರಿಗೆ ತಿಳಿದು ಒತ್ತಾಯ ಪೂರ್ವಕ ಈ ಸಂಬಂಧದಿಂದ ಆಕೆಯನ್ನು ಬಿಡಿಸುವಲ್ಲಿ ಯಶಸ್ವಿಯಾಗಿದ್ದರೆನ್ನಲಾಗಿದೆ.
ಆ ನಂತರ ಈ ಕುಟುಂಬ ಮೂಡಬಿದ್ರೆಯ ದರೆಗುಡ್ಡೆಗೆ ಮನೆಯನ್ನು ಶಿಫ್ಟ್ ಮಾಡಿದ್ದಾರೆ.
ತಂದೆ ಇಲ್ಲದ ಪ್ರಿಯಾಂಕಳಿಗೆ ಯೋಗ್ಯ ವರನನ್ನು ಹುಡುಕಿ ಕೊನೆಗೆ ವಿದೇಶದಲ್ಲಿ ಕೆಲಸದಲ್ಲಿರುವ ಉಡುಪಿಯ ಶಿರೂರು ಮೂಲದ ಹುಡುಗ ಸಿಕ್ಕಿದ್ದಾನೆ.
ಈ ಹುಡುಗನೊಂದಿಗೆ ಐದಾರು ವರ್ಷದ ಸಂಪರ್ಕದಲ್ಲಿದ್ದು ಇತ್ತೀಚೆಗೆ ನಿಶ್ಚಿತಾರ್ಥವೂ ಆಗಿತ್ತು. ಆದರೆ ನಡೆದದ್ದೇ ಬೇರೆ.
ಮನೆಯವರಿಗೆ ಜ್ಯೂಸ್‌ನಲ್ಲಿ ಮತ್ತು ಬರುವ ಔಷಧ ಕುಡಿಸಿದ್ದ ಪ್ರಿಯಾಂಕ ?
ಮೆಹೆಂದಿ ನಡೆವ ಹಿಂದಿನ ದಿನ ರಾತ್ರಿ ನವವಧು ಪ್ರಿಯಾಂಕ ಸ್ವತ ಮನೆಯವರಿಗೆಲ್ಲ ಜ್ಯೂಸ್ ನೀಡಿದ್ದಳಂತೆ.
ಆ ಜ್ಯೂಸ್ ಕೊಂಚ ಕಹಿಯಾಗಿತ್ತಂತೆ. ಇದೇನು ಕಹಿ ಎಂದು ಕೆಲವರು ಕೇಳಿ ಕುಡಿಯದೇ ಹಾಗೆಯೇ ಬಿಟ್ಟುಬಿಟ್ಟಿದ್ದಾರೆ.
ಇದಾದ ಬಳಿಕ ಕೆಲ ಹೊತ್ತಿನಲ್ಲಿ ನಿಧಾನವಾಗಿ ಅಮಲೇರಿಸಿಕೊಂಡಂತಾಗಿ ಮನೆಯವರೆಲ್ಲ ನಿದ್ರೆಗೆ ಜಾರಿದ್ದಾರೆ.
ಇದೇ ಸಮಯ ನೋಡಿ ಪ್ರಿಯಾಂಕ ಚಿನ್ನಾಭರಣ, ಪಾಸ್ ಪೋರ್ಟ್, ಇತರ ಅಮೂಲ್ಯ ವಸ್ತುಗಳೊಂದಿಗೆ ಮನೆಯಿಂದ ರಾತ್ರಿಯೇ ಪರಾರಿಯಾಗಿದ್ದಾಳೆ.
ಪ್ರಿಯಾಂಕಾ ಕಾಣೆಯಾದದ್ದು ಗೊತ್ತಾದ ಬಳಿಕ ನಡೆದ ವಿಚಾರಣೆಯಲ್ಲಿ ಆಕೆಗೆ ಪ್ರತ್ಯೇಕ ಬ್ಯಾಂಕ್ ಅಕೌಂಟ್ ಇತ್ತೆಂದು ಗೊತ್ತಾಗಿದೆ.
ಅದರಲ್ಲಿ ಆಗಾಗ ಅನಾಮಿಕವಾಗಿ ಒಂದಷ್ಟು ಮೊತ್ತ ಜಮೆಯಾಗುತ್ತಿತ್ತು ಎಂದು ಗೊತ್ತಾಗಿದೆ.
ಮಾಹಿತಿ ಪ್ರಕಾರ ಸುಮಾರು ಒಂದು ಲಕ್ಷ ರೂಪಾಯಿ ಆ ಬ್ಯಾಂಕ್ ಅಕೌಂಟಿನಲ್ಲಿದೆ ಎಂದು ತಿಳಿದು ಬಂದಿದೆ.
ಆದರೆ ಈ ಹಣ ಅವಳ ಖಾತೆಗೆ ಹಾಕಿದವರಾರು ? ಈ ಬಗ್ಗೆ ಸಾಕಷ್ಟು ಅನುಮಾನಗಳಿದ್ದು ಪೋಲಿಸ್ ತನಿಖೆಯಿಂದ ಇದು ಸ್ಪಷ್ಟವಾಗಬೇಕಿದೆ.
ಇದೊಂದು ಲವ್ ಜಿಹಾದ್ ಎಂದು ಹಿಂದೂ ಪರ ಸಂಘಟನೆಗಳು ಗಂಭೀರ ಆರೋಪ ಮಾಡಿದ್ದು, ಸ್ಥಳೀಯ ನಾಯಕರು ಇದರ ತನಿಖೆಗೆ ಒತ್ತಾಯಿಸಿದ್ದಾರೆ.
ಇದು ಬರೇ ಲವ್ ಪ್ರಕರಣ ಅಲ್ಲ ಇದು ಲವ್ ಜಿಹಾದ್ ಎಂದು ಕಾಣಿಸುತ್ತದೆ. ವ್ಯವಸ್ಥಿತವಾಗಿ ಮದುವೆ ಆಗಲು ಎಲ್ಲಾ ಸಿದ್ಧತೆಗಳು ನಡೆದಿರುವಾಗ ಏಕಾಎಕಿ ನಾಪತ್ತೆ ಆಗಿರುವುದಕ್ಕೆ ಐಸಿಸ್ ಗ್ರಾಮ ಮಟ್ಟಕ್ಕೂ ಇಳಿಯುತ್ತಿದೆಯೇ ಎಂಬ ಗುಮಾನಿ ಮೂಡುತ್ತಿದೆ.
ಇದರ ಬಗ್ಗೆ ಸರಿಯಾದ ತನಿಖೆಯನ್ನು ಪೋಲಿಸ್ ಇಲಾಖೆ ಮಾಡಬೇಕಾಗಿದೆ ಮತ್ತು ಸತ್ಯ ಹೊರಬರಬೇಕಾಗಿದೆ’ ಜಗದೀಶ ಅಧಿಕಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
You must be logged in to post a comment Login