Connect with us

    LATEST NEWS

    ಪರೇಶ್ ಮಸ್ತ್ ಕೊಲೆ ಪ್ರಕರಣ ಕುಮಟಾ ಉದ್ವಿಗ್ನ-ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾಲ್ಕಿತ್ತ ಪೊಲೀಸರು

    ಪರೇಶ್ ಮಸ್ತ್ ಕೊಲೆ ಪ್ರಕರಣ ಕುಮಟಾ ಉದ್ವಿಗ್ನ- ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾಲ್ಕಿತ್ತ ಪೊಲೀಸರು

    ಕಾರವಾರ. ಡಿಸೆಂಬರ್ 11: ಹೊನ್ನಾವರದಲ್ಲಿ ನಡೆದಂತಹ ಪರೇಶ್ ಮೇಸ್ತ್ ಹತ್ಯಾ ಪ್ರಕರಣ ಉತ್ತರಕನ್ನಡದಾದ್ಯಂತ ಬಿಗುವಿನ ವಾತಾವರಣ ಸೃಷ್ಠಿಸಿದೆ.

    ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಕುಮಟಾ, ಗೋಕರ್ಣ, ಅಂಕೋಲಾ ಸೇರಿದಂತೆ ಇನ್ನಿತರ ಭಾಗಗಳಲ್ಲಿ ಉದ್ವಿಗ್ನ ವಾತಾವರಣ ನೆಲೆಸಿದೆ.

    ಹೊನ್ನಾವರಕ್ಕೆ ಮಾತ್ರ ಸೀಮಿತವಾಗಿದ್ದ ಪರೇಶ್ ಮೆಸ್ತ್ ಹತ್ಯಾ ಪ್ರಕರಣದ ಪ್ರತಿಭಟನೆಯ ಕಾವು ಜಿಲ್ಲೆಯ ಇತರೆಡೆಗಳಿಗೂ ಹರಡುತ್ತಿದೆ.

    ಇಂದು ಕುಮಟಾದಲ್ಲಿ ಪರೇಶ್ ಮೇಸ್ತ್ ಹತ್ಯಾ ಪ್ರಕರಣವನ್ನು ಖಂಡಿಸಿ ಹಿಂದೂ ಪರ ಸಂಘಟನೆಗಳು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾರೂಪ ತಾಳಿದೆ.

    ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಮುಂದಾದ ಹಿನ್ನಲೆಯಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ಸಂಭವಿಸಿದೆ.

    ಈ ಹಿನ್ನಲೆಯಲ್ಲಿ ಪೊಲೀಸರು ಲಾಠಿ ಚಾರ್ಚ್ ನಡೆಸುತ್ತಿದ್ದಂತೆ ಕೆರಳಿದ ಪ್ರತಿಭಟನಾಕಾರರು ಪೊಲೀಸರತ್ತ ಕಲ್ಲು ತೂರಾಟ ನಡೆಸಿದ್ದಾರೆ.

    ಈ ಕಲ್ಲು ತೂರಾಟ ಸಂದರ್ಭದಲ್ಲಿ ಪೊಲೀಸರ ವಾಹನಗಳು ಜಖಂಗೊಂಡಿದ್ದು, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಬಸ್ ನ್ನು ಕೂಡ ಪ್ರತಿಭಟನಾಕಾರರು ಟಾರ್ಗೇಟ್ ಮಾಡಿದ್ದಾರೆ.

    ಕಲ್ಲು ತೂರಾಟ ಸಂದರ್ಭದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತೆರಳಿದ ಹಿನ್ನಲೆಯಲ್ಲಿ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗದ ಕಾರಣ ಪೊಲೀಸರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    ಪ್ರತಿಭಟನಕಾರರ ಆ್ರೋಶಕ್ಕೆ ತುತ್ತಾದ ಐಜಿಪಿ ವಾಹನ ಸುಟ್ಟು ಕರಕಲಾಗಿರುವುದು

    ಪ್ರತಿಭಟನಾಕಾರರ ಆಕ್ರೋಶಕ್ಕೆ ಪಶ್ಚಿಮವಲಯ ಪೊಲೀಸ್ ಮಹಾ ನಿರೀಕ್ಷಕ ಹೇಮಂತ ನಿಂಬಾಳ್ಕರ್ ಅವರ ಕಾರು ಕೂಡ ಗುರಿಯಾಗಿದ್ದು, ಐಜಿಪಿ ಹೇಮಂತ್ ನಿಂಬಾಳ್ಕರ್ ಅವರ ಕಾರಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ.

     

    ಈ ಹಿನ್ನಲೆಯಲ್ಲಿ ಕುಮಟಾದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪರಿಸ್ಥಿತಿ ನಿಭಾಯಿಸಲು ಹೆಚ್ಚಿನ ಪೊಲೀಸ್ ಪಡೆಯನ್ನು ಕುಮಟಾಕ್ಕೆ ಕರೆಸಲಾಗುತ್ತಿದೆ.

    ಸ್ಥಳಕ್ಕೆ ಉತ್ತರ ಕನ್ನಡ ಎಸ್ಪಿ, ಹಾಗೂ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ನಡೆಸಿದ್ದಾರೆ.

    ಕುಮಟಾದಲ್ಲಿನ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದ್ದು ಜಿಲ್ಲೆಯ ಇತರೆಡೆಗೂ ಘರ್ಷಣೆ ಹಬ್ಬುವ ಸಾಧ್ಯತೆ ಇದೆ.

    ಈ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ನಡೆಯುತ್ತಿರುವ ಚಟುವಟಿಕೆಯ ಮೇಲೆ ಗುಪ್ತಚರ ಇಲಾಖೆ ಹದ್ದಿನ ಕಣ್ಣಿರಿಸಿದೆ.

    VIDEO

    Share Information
    Advertisement
    Click to comment

    You must be logged in to post a comment Login

    Leave a Reply