Connect with us

    LATEST NEWS

    ಕಾಮನ್ವೆಲ್ತ್ ಪವರ್ ಲಿಪ್ಟಿಂಗ್ ನಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದ ಪ್ರತೀಕ್ಷಾ

    ಉಡುಪಿ ಡಿಸೆಂಬರ್ 10: ನ್ಯೂಜಿಲ್ಯಾಂಡ್ ನ ಆಕ್ಲೆಂಡ್ ನಲ್ಲಿ ನಡೆದ ಕಾಮನವೆಲ್ತ್ ಪವರ್ ಲಿಪ್ಟಿಂಗ್ ಚಾಂಪಿಯನ್ ಷಿಪ್ ನಲ್ಲಿ ಶ್ರೀ ವೀರ ಮಾರುತಿ ಜಿಮ್ ಬ್ರಹ್ಮಾವರದ ವಿಧ್ಯಾರ್ಥಿನಿ ಪ್ರತೀಕ್ಷಾ 84 ಕೆಜಿ ಜೂನಿಯರ್ ವಿಭಾಗದಲ್ಲಿ ಒಟ್ಟು 473 ಕೆ.ಜಿ ಭಾರವನ್ನು ಎತ್ತಿ ಚಿನ್ನದ ಪದಕವನ್ನು ಪಡೆದು ಸ್ಕಾಟ್ ಈವೆಂಟ್ ನಲ್ಲಿ 193 ಕೆಜಿ ಭಾರವನ್ನು ಎತ್ತಿ ಕೂಟ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾರೆ.

    ಬೆಂಚ್ ಪ್ರೇಸ್ ವಿಭಾಗದಲ್ಲಿ 105 ಕೆಜಿ ಭಾರವನ್ನೆತ್ತಿ ಜೂನಿಯರ್ ವಿಭಾಗದಲ್ಲಿ ಬಲಾಡ್ಯ ಮಹಿಳೆ ಪ್ರಶಸ್ತಿ ಪಡೆದಿದ್ದಾರೆ.
    ಇವರು ಎಂಜಿಎಂ ನ ಪಣಿಯಾಡಿಯ ಗಣಪತಿ ಎಂ.ಎಸ್ ಹಾಗೂ ಗೀತಾ ನಾಯ್ಕ್ ದಂಪತಿಯ ಪುತ್ರಿ, ತರಬೇತಿಯನ್ನು ಶ್ರೀ ವೀರಮಾರುತಿ ಜಿಮ್ ಬ್ರಹ್ಮಾವರದ ರಾಜೇಂದ್ರ ಗಾಣಿಗ ಹಾಗೂ ಜಿ. ವಿ ಅಶೋಕ ಕೋಟ ಇವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply