Connect with us

    FILM

    ದಕ್ಷಿಣ ಭಾರತದ ಜನಪ್ರಿಯ ನಟ ಚಿಯಾನ್ ವಿಕ್ರಮ್‌ಗೆ ಹೃದಯಾಘಾತ

    ಚೆನ್ನೈ, ಜುಲೈ 8: ದಕ್ಷಿಣ ಭಾರತದ ಜನಪ್ರಿಯ ನಟ ಚಿಯಾನ್ ವಿಕ್ರಮ್‌ಗೆ ಹೃದಯಾಘಾತವಾಗಿದೆ. ಶುಕ್ರವಾರ (ಜುಲೈ 7) ಬೆಳಗ್ಗೆ ಹೃದಯಾಘಾತಕ್ಕೆ ಒಳಗಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. ಚಿಯಾನ್ ವಿಕ್ರಮ್ ಎಂದೇ ಜನಪ್ರಿಯರಾಗಿರುವ ನಟನ ಅಸಲಿ ಹೆಸರು ಕೆನಡಿ ಜಾನ್ ವಿಕ್ಟರ್. ತಮಿಳು ಚಿತ್ರರಂಗದಲ್ಲಿ ಹಲವು ಏಳುಬೀಳು ಕಂಡಿರುವ ವಿಕ್ರಮ್ ಏಳು ಫಿಲಂಫೇರ್ ಪ್ರಶಸ್ತಿ ಪಡೆದಿದ್ದು, ಗಾಯಕರಾಗಿ ಕೂಡಾ ಹೆಸರುವಾಸಿಯಾಗಿದ್ದಾರೆ.

    ರಾಷ್ಟ್ರಪ್ರಶಸ್ತಿ ವಿಜೇತ ನಟ ವಿಕ್ರಮ್ ಹಲವು ಬಾರಿ ತಮಿಳುನಾಡು ಸರ್ಕಾರದ ರಾಜ್ಯ ಪ್ರಶಸ್ತಿ ಗಳಿಸಿದ್ದಾರೆ. 2011ರಲ್ಲಿ ಪೀಪಲ್ಸ್ ಯೂನಿವರ್ಸಿಟಿ ಆಫ್ ಮಿಲನ್ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಚೆನ್ನೈನ ಲೊಯೊಲಾ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದರು. ಜೊತೆಗೆ ನಾಟಕರಂಗದಲ್ಲೂ ತೊಡಗಿಸಿಕೊಂಡರು. ಚಿತ್ರರಂಗಕ್ಕೆ ಕಾಲಿಟ್ಟ ಆರಂಭಿಕ ವರ್ಷಗಳಲ್ಲಿ ಹೆಚ್ಚಿನ ಯಶಸ್ಸು ಗಳಿಸಲು ಸಾಧ್ಯವಾಗಿರಲಿಲ್ಲ. ಅದರೆ, ನಂತರ ಸೂಪರ್ ಸ್ಟಾರ್ ಆಗಿ ಬೆಳೆದರು.

    ವಿಕ್ರಮ್ ಅವರು ಸೇಲಂ ಬಳಿಯ ಗಿರಿಧಾಮದಲ್ಲಿರುವ ಬೋರ್ಡಿಂಗ್ ಶಾಲೆಯಾದ ಯೆರ್ಕಾಡ್ ಮೌಂಟೇನ್ ಶಾಲೆಯಲ್ಲಿ ಶಿಕ್ಷಣ ಪಡೆದರು.1983ರಲ್ಲಿ ಪದವಿ ಪಡೆದರು. ಕರಾಟೆ, ಕುದುರೆ ಸವಾರಿ ಮತ್ತು ಈಜುಗಳಲ್ಲಿ ಪಾಲ್ಗೊಳ್ಳುವ ಮೂಲಕ ಶಾಲೆಯಲ್ಲಿ ತಮ್ಮ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಂಡು ಕ್ರೀಡೆಯಲ್ಲಿ ತೊಡಗಿಕೊಂಡಿದ್ದರು. ಚಿತ್ರರಂಗಕ್ಕೆ ಬಂದ ಬಳಿಕವೂ ತಮ್ಮ ಮೈಕಟ್ಟು, ದೇಹಾದಾರ್ಢ್ಯತೆ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದ್ದರು. ಪಾತ್ರಕ್ಕೆ ತಕ್ಕಂತೆ ದೇಹ ದಂಡಿಸಿ, ಮೈಕಟ್ಟು ಬದಲಾಯಿಸಿಕೊಳ್ಳುತ್ತಿದ್ದರು. ಇತ್ತೀಚೆಗೆ ತಮ್ಮ ಮಗನ ಜೊತೆ ಒಟ್ಟಿಗೆ ನಟಿಸಿ ಕಿಚ್ಚು ಹಬ್ಬಿಸಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply