LATEST NEWS
ಕೆಮ್ಮ ಜ್ವರದಿಂದ ಬಳಲುತ್ತಿದ್ದ ಬಾಲಕನ ಶ್ವಾಸಕೋಶದಲ್ಲಿ ಪತ್ತೆಯಾಯ್ತು ಗುಂಡು ಸೂಜಿ
ಮಂಗಳೂರು: ಕೆಮ್ಮ ಜ್ವರದಿಂದ ಬಳಲುತ್ತಿದ್ದ ಬಾಲಕನ ಚಿಕಿತ್ಸೆಗೆ ವೈದ್ಯರ ಬಳಿ ತೆರಳಿದಾಗ ಬಾಲಕ ಶ್ವಾಸಕೋಶದಲ್ಲಿ ಗುಂಡು ಸೂಜಿ ಪತ್ತೆಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಬಜಾಲ್ ಪಕ್ಕಲಡ್ಕ ನಿವಾಸಿ ಅಬ್ದುಲ್ ಖಾದರ್ ಪುತ್ರ 12 ವರ್ಷದ ಮುಬಶ್ಶೀರ್ ಕಳೆದ ಕೆಲವು ದಿನಗಳಿಂದ ಕೆಮ್ಮ-ಜ್ವರದಿಂದ ಬಳಲುತ್ತಿದ್ದ, ಸ್ಥಳೀಯ ವೈದ್ಯರಲ್ಲಿ ತೋರಿಸಿದರೂ ಗುಣಮುಖರಾಗದ ಹಿನ್ನಲೆ ಬಾಲಕನ ಪೋಷಕರು ಕಂಕನಾಡಿಯ ಮಕ್ಕಳ ತಜ್ಞ ಡಾ.ರಾಮ್ ಗೋಪಾಲ್ ಶಾಸ್ತ್ರಿ ಬಳಿ ಹೋಗಿದ್ದಾರೆ. ಆಗ ವೈದ್ಯರು ಬಾಲಕನ ಎಕ್ಸ್‌ರೇ ತೆಗೆಸಿದಾಗ ಬಾಲಕನ ಬಲಬದಿಯ ಶ್ವಾಸಕೋಶದಲ್ಲಿ ನೋಟಿಸ್ ಬೋರ್ಡಿಗೆ ಅಂಟಿಸುವ ಗುಂಡುಸೂಜಿ ಪತ್ತೆಯಾಗಿದೆ.
ಬಾಲಕನಿಗೆ ಶಸ್ತ್ರಚಿಕಿತ್ಸೆ ನೀಡಲೆಂದು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿನ ವೈದ್ಯರು ಶಸ್ತ್ರಚಿಕಿತ್ಸೆ ಮಾಡದೆ ಪೈಪ್ ಮಾದರಿಯ ವಸ್ತುವೊಂದರ ಸಹಾಯದಿಂದ ಗುಂಡುಸೂಜಿಯನ್ನು ಯಶಸ್ವಿಯಾಗಿ ಹೊರತೆಗೆದು ಬಾಲಕನ ಜೀವ ಉಳಿಸಿದ್ದಾರೆ. ಹೊರತೆಗೆದಿದ್ದಾರೆ. ಬುಧವಾರ ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆದ ಬಾಲಕ ಗುರುವಾರ ಮನೆಗೆ ತೆರಳಿದ್ದಾನೆ.