Connect with us

LATEST NEWS

ಕುಂದಾಪುರದಲ್ಲಿ ಮುಂದುವರೆದೆ ಗೋಕಳ್ಳತನ…ಕೊಟ್ಟಿಗೆಗೆ ನುಗ್ಗಿ ಗರ್ಭದ ಹಸುವಿನ ಕಳ್ಳತನ

ಕುಂದಾಪುರ ಮಾರ್ಚ್ 19: ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೆ ಬಂದರೂ ಗೋಕಳ್ಳತನ ಮಾತ್ರ ಮುಂದುವರೆದಿದೆ. ಕುಂದಾಪುರ ವಿಧಾನಸಭಾ ಕ್ಷೇತ್ರ ಗುಳ್ಳಾಡಿ ಗ್ರಾಮದಲ್ಲಿ ಕೊಟ್ಟಿಗೆಗೆ ನುಗ್ಗಿ ಗರ್ಭದ ಹಸುವೊಂದನ್ನು ಕಳ್ಳತನ ಮಾಡಲಾಗಿದೆ.


ಬ್ರಹ್ಮಾವರ ತಾಲೂಕು ಗಿಳಿಯಾರು ಬಳಿಯ ಗುಳ್ಳಾಡಿ ಗ್ರಾಮ ಮಂಜಿ ಅವರ ಕೊಟ್ಟಿಗೆಯಲ್ಲಿದ್ದ ಗರ್ಭದ ಹಸುವನ್ನು ಕಳ್ಳರು ರಾತ್ರಿ ಸಂದರ್ಭ ಕದ್ದೊಯ್ದಿದ್ದಾರೆ. ಬಡ ಕುಟುಂಬದ ಮಂಜಿ ಅವರು ತನ್ನ ಮೊಮ್ಮಗಳೊಂದಿಗೆ ಕಷ್ಟದ ಜೀವನ ನಡೆಸುತ್ತಿದ್ದು, ತಮ್ಮ ದೈನಂದಿನ ಖರ್ಚುಗಳಿಗೆ ದನದ ಹಾಲನ್ನೆ ಅವಲಂಭಿಸಿದ್ದರು.

ಈಗ ಗೋಕಳ್ಳರು ಅವರ ಜೀವನೋಪಾಯದ ಪ್ರಮುಖ ಆಧಾರಕೊಂಡಿಯನ್ನೇ ಕದ್ದೊಯ್ದಿದು, ಮುಂದೆ ಜೀವನ ನಡೆಸುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಈ ಘಟನೆ ಕುರಿತಂತೆ ಕೋಟ ಪೋಲೀಸ್ ಠಾಣೆಯಲ್ಲಿ ಹಸು ಕಳ್ಳತನ ಪ್ರಕರಣ ದಾಖಲಾಗಿದ್ದು. ಗೋ ಕಳ್ಳರನ್ನು ಶೀಘ್ರ ಬಂಧಿಸುವಂತೆ ಕುಂದಾಪುರ ಬಿಜೆಪಿ ಯುವಮೋರ್ಚಾ ಆಗ್ರಹಿಸಿದೆ.