LATEST NEWS
ಮಂಗಳೂರು : ಅಂಗವಿಕಲ ಬೀದಿ ವ್ಯಾಪಾರಿಗೆ ಹಫ್ತಾ ವಸೂಲಿ ಹೆಸರಲಿ ಕಿರುಕುಳ ಆರೋಪ, ವಿಡಿಯೋ ವೈರಲ್
ಮಂಗಳೂರಿನ ಪಡೀಲ್ ಮುಖ್ಯ ರಸ್ತೆಯ ಬಳಿ ಕಳೆದ ಹಲವು ವರುಷಗಳಿಂದ ಹೂ ಮಾರಿ ಬೀದಿ ವ್ಯಾಪಾರ ಮಾಡುವ ಮೂಲಕ ಜೀವನ ನಿರ್ವಹಿಸುತ್ತಿರುವ ಚಂದ್ರಹಾಸ್ ಪೂಜಾರಿ ಎಂಬವರಿಗೆ ಕಳೆದ ಕೆಲವು ದಿನಗಳಿಂದ ಹಫ್ತಾ ವಸೂಲಿ ಹೆಸರಲ್ಲಿ ಕಿರುಕುಳ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ.
ಮಂಗಳೂರು : ಮಂಗಳೂರಿನ ಪಡೀಲ್ ಮುಖ್ಯ ರಸ್ತೆಯ ಬಳಿ ಕಳೆದ ಹಲವು ವರುಷಗಳಿಂದ ಹೂ ಮಾರಿ ಬೀದಿ ವ್ಯಾಪಾರ ಮಾಡುವ ಮೂಲಕ ಜೀವನ ನಿರ್ವಹಿಸುತ್ತಿರುವ ಚಂದ್ರಹಾಸ್ ಪೂಜಾರಿ ಎಂಬವರಿಗೆ ಕಳೆದ ಕೆಲವು ದಿನಗಳಿಂದ ಹಫ್ತಾ ವಸೂಲಿ ಹೆಸರಲ್ಲಿ ಕಿರುಕುಳ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ.
ಈ ಕುರಿತ ವಿಡಿಯೊ ಒಂದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಸ್ಥಳೀಯ ಮಾಜಿ ಕಾರ್ಪೊರೇಟರ್ ಓರ್ವರ ಹೆಸರು ಇದರ ಹಿಂದೆ ಇದ್ದು ಹಫ್ತಾ ವಸೂಲಿ ಮಾಡುತ್ತಿರುವ ಬಗ್ಗೆ ಚಂದ್ರಹಾಸ್ ಪೂಜಾರಿ ವಿಡಿಯೋ ಮೂಲಕ ಚಿತ್ರಿಸಿದ ಹೇಳಿಕೆಯ ಆರೋಪವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು ಪ್ರಶ್ನಿಸಲು ಬಂದ ಅಳಪೆ ವಾರ್ಡ್ ಮಹಿಳೆಯೋರ್ವಳು ಅಂಗವಿಕಲ ಬೀದಿ ವ್ಯಾಪಾರಿ ತರಾಟೆಗೆ ತೆಗೆದುಕೊಂಡಾಗ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇದನ್ಣು ಓದಿ….