LATEST NEWS
ಡೀಸೆಲ್ ಲೀಟರ್‌ಗೆ ದಾಖಲೆಯ 61.74 ರೂ – ಪೆಟ್ರೋಲ್ 71 ರೂ.
ಡೀಸೆಲ್ ಲೀಟರ್‌ಗೆ ದಾಖಲೆಯ 61.74 ರೂ- ಪೆಟ್ರೋಲ್ 71 ರೂ.
ಹೊಸದಿಲ್ಲಿ, ಜನವರಿ 15 : ಡೀಸೆಲ್ ದರ ದಾಖಲೆಯ ಲೀಟರ್‌ಗೆ 61.74 ರೂ. ತಲುಪಿದೆ.
ಇದೇ ವೇಳೆ ಪೆಟ್ರೋಲ್ ದರ ಲೀಟರ್‌ಗೆ 71 ರೂ. ತಲುಪಿದೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ದರ ನಿರಂತರವಾಗಿ ಏರುತ್ತಿರುವುದೇ ಇದಕ್ಕೆ ಕಾರಣವಾಗಿದೆ ಎಂದು ತೈಲ ಕಂಪೆನಿಗಳು ಹೇಳಿಕೊಂಡಿವೆ.
ಇಂದು ಸೋಮವಾರ ದಿಲ್ಲಿಯಲ್ಲಿ ಡೀಸೆಲ್ ದರ ಲೀಟರ್‌ಗೆ 61.74 ರೂ. ಗಳ ಗರಿಷ್ಠ ಎತ್ತರವನ್ನು ತಲುಪಿದೆ.
ಪೆಟ್ರೋಲ್ ದರ ಲೀಟರ್‌ಗೆ 71.18 ರೂ. ಇದ್ದು ಇದು 2014ರ ಆಗಸ್ಟ್ ಬಳಿಕದ ಗರಿಷ್ಠ ದರವಾಗಿದೆ.
ಸರಕಾರಿ ಒಡೆತನದ ತೈಲ ಕಂಪೆನಿಗಳು ಬಿಡುಗಡೆ ಮಾಡುವ ದಿನವಹಿ ಇಂಧನ ಬೆಲೆಯ ಪಟ್ಟಿಯಲ್ಲಿ ಇದು ಗೊತ್ತಾಗಿದೆ.
ಪೆಟ್ರೋಲ್, ಡೀಸೆಲ್ ದರಗಳು 2017ರ ಡಿಸೆಂಬರ್‌ನಿಂದ ಒಂದೇ ಸಮನೆ ಏರುತ್ತಿವೆ.
ಅಂದು ದಿಲ್ಲಿಯಲ್ಲಿ ಡೀಸೆಲ್ ದರ ಲೀಟರ್‌ಗೆ 58.34 ರೂ. ಇತ್ತು. ಕಳೆದ ಒಂದು ತಿಂಗಳಲ್ಲಿ ಇದು 3.40 ರೂ. ಏರಿದೆ.
ಪೆಟ್ರೋಲ್ ದರ 2.09 ರೂ.ಏರಿದೆ ಎಂದು ತೈಲ ಕಂಪೆನಿಗಳು ತಿಳಿಸಿವೆ.
You must be logged in to post a comment Login