Connect with us

    LATEST NEWS

    ನಾಪತ್ತೆಯಾಗಿದ್ದ ಪ್ರವೀಣ್ ತೋಗಾಡಿಯಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ

    ನಾಪತ್ತೆಯಾಗಿದ್ದ ಪ್ರವೀಣ್ ತೋಗಾಡಿಯಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ

    ಅಹ್ಮದಾಬಾದ್ ಜನವರಿ 16: ಸೋಮವಾರ ನಾಪತ್ತೆಯಾಗಿದ್ದ ವಿಶ್ವ ಹಿಂದೂ ಪರಿಷತ್ ಮುಖಂಡ ಪ್ರವೀಣ್ ತೊಗಾಡಿಯಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಅಹ್ಮದಾಬಾದ್ ನ ಶಹಿಬಾಗ್ ಪ್ರದೇಶದಲ್ಲಿ ಪತ್ತೆಯಾಗಿದ್ದಾರೆ.

    ಇತ್ತೀಚೆಗಷ್ಟೇ ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರಾಜಸ್ತಾನ ಪೊಲೀಸರು ತೊಗಾಡಿಯಾ ಅವರಿಗೆ ವಾರಂಟ್ ಜಾರಿ ಮಾಡಿದ್ದರು. ಅಹ್ಮದಾಬಾದ್ ನಲ್ಲಿರುವ ವಿಹೆಚ್ ಪಿ ಪ್ರಧಾನ ಕಚೇರಿಗೆ ವಾರಂಟ್ ನೀಡಲಾಗಿತ್ತು. ಅಂದು ಮಧ್ಯಾಹ್ಮವೇ ತೊಗಾಡಿಯಾ ಅವರು ಏಕಾಂಗಿಯಾಗಿ ಪಾರ್ಕ್ ತೆರಳಿದ್ದರು ಎಂದು ತಿಳಿದುಬಂದಿದೆ.

    ನಿನ್ನೆ ಸಂಜೆ ಪಾರ್ಕ್ ಗೆ ತೆರಳಿದ ತೊಗಾಡಿಯಾ ಅವರಿಗೆ ಅನಾರೋಗ್ಯವಾಗಿದ್ದು ಅವರು ಕೂಡ ಪ್ರಜ್ಞಾಹೀನರಾಗಿ ಕುಸಿದು ಬಿದ್ದಿದ್ದಾರೆ. ಈ ವೇಳೆ ಅವರನ್ನು ಸ್ಥಳೀಯರು ಕೂಡಲೇ ಅಹ್ಮದಾಬಾದ್ ನ ಚಂದ್ರಮಣಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಪ್ರಸ್ತುತ ತೊಗಾಡಿಯಾ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

    ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಚಂದ್ರಮಣಿ ಆಸ್ಪತ್ರೆಯ ನಿರ್ದೇಶಕ ರೂಪ್ ಕುಮಾರ್ ಅಗರ್ವಾಲ್ ಅವರು, ತೊಗಾಡಿಯಾ ಅವರು ಲೋ ಬ್ಲಡ್ ಶುಗರ್ ನಿಂದಾಗಿ ಬಳಲಿದ್ದಾರೆ. ಹೀಗಾಗಿ ಅವರು ಪಾರ್ಕ್ ನಲ್ಲಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿರಬಹುದು ಎಂದು ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply