MANGALORE
ಲ್ಯಾಪ್ ಟಾಪ್ ಹಾಗೂ ಮೊಬೈಲ್ ಖರೀದಿಗೆ ಸಾಲಕ್ಕಾಗಿ ಬ್ಯಾಂಕ್ ಗಳ ಮುಂದೆ ಪೋಷಕರು…!!
ಮಂಗಳೂರು ಜುಲೈ 08: ಕೊರೊನಾ ಮಹಾಮಾರಿ ಆಂತಕ ದ ನಡುವೆ ಮಕ್ಕಳಿಗೆ ಸರ್ಕಾರ ಆನ್‍ಲೈನ್ ಮೂಲಕ ತರಗತಿ ನಡೆಸಲು ತಯಾರಿ ನಡೆಸುತ್ತಿದೆ. ಆದರೆ ಇತ್ತ ಪೋಷಕರಿಗೆ ಮತ್ತೊಂದು ಸಮಸ್ಯೆ ಆರಂಭವಾಗಿದ್ದು, ಆನ್ ಲೈನ್ ಕ್ಲಾಸ್ ಬಳಕೆಗಾಗಿ ಲ್ಯಾಪ್ ಟಾಪ್ ಹಾಗೂ ಮೊಬೈಲ್ ಖರೀದಿಗಾಗಿ ಪೋಷಕರು ಸಾಲಕ್ಕಾಗಿ ಬ್ಯಾಂಕಿನ ಮೊರೆ ಹೋಗಿದ್ದಾರೆ.
ಗ್ರಾಮೀಣ ಪ್ರದೇಶದ ಹೆಚ್ಚಿನ ಜನರಲ್ಲಿ ಆನ್‍ಲೈನ್ ಕ್ಲಾಸ್ ಗಾಗಿ ಬೇಕಾದ ಆಧುನಿಕ ತಂತ್ರಜ್ಞಾನ ಮೊಬೈಲ್, ಕಂಪ್ಯೂಟರ್, ಲ್ಯಾಪ್ ಟಾಪ್ ಹಾಗೂ ಟಿವಿ ಇಲ್ಲ. ಆದರೆ ಆನ್‍ಲೈನ್ ಕ್ಲಾಸ್‍ಗೆ ಇವೆಲ್ಲದರ ಅಗತ್ಯ ಮಕ್ಕಳಿಗೆ ಇದೆ ಈ ಹಿನ್ನಲೆ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಸಹಕಾರಿ ಬ್ಯಾಂಕುಗಳಿಗೆ ಪೋಷಕರು ಸಾಲಕ್ಕಾಗಿ ಮನವಿ ಸಲ್ಲಿಸಿದ್ದಾರೆ. ಇನ್ನು ಕೆಲವರು ಚಿನ್ನಾಭರಣಗಳನ್ನು ಅಡವಿಟ್ಟು ಹಾಗೂ ಹೆಚ್ಚಿನ ಬಡ್ಡಿಗೆ ವೈಯಕ್ತಿಕ ಸಾಲ ಪಡೆಯಲು ಮುಂದಾಗಿದ್ದಾರೆ.
ಈಗಾಗಲೇ ಜಿಲ್ಲೆಯಲ್ಲಿ ಪೋಷಕರು ವಿವಿಧ ಬ್ಯಾಂಕ್ ಗಳಿಗೆ ತೆರಳುತ್ತಿದ್ದು, ಆನ್ಲೈನ್ ಉಪಕರಣ ತೆಗೆಯಲು ಬ್ಯಾಂಕಿನಲ್ಲಿ ಹೇಳಿಕೊಂಡು ಸಾಲ ಕೇಳಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಇದನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಕೃತ ಬ್ಯಾಂಕ್ ಗಳ ಮೂಲಕ ಇಂತಹ ಅಗತ್ಯಗಳಿಗೆ ಬಡ್ಡಿ ರಹಿತ ಸಾಲ ನೀಡಬೇಕೆಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ಚಿತ್ತರಂಜನ್ ಬೋಳಾರ್ ಒತ್ತಾಯಿಸಿದ್ದಾರೆ.
Facebook Comments
You may like
ಆನ್ ಲೈನ್ ಕ್ಲಾಸ್ ವೇಳೆ ಗೆಳೆಯನ ಲೈಂಗಿಕತೆ ಬಗ್ಗೆ ಗಾಸಿಫ್ ಮಾತನಾಡಿ ವೈರಲ್ ಆದ ಶ್ವೇತಾ…..!!
ಮನೆ ಜಪ್ತಿ ಮಾಡಲು ಬಂದ ಬ್ಯಾಂಕ್ ಸಿಬ್ಬಂದಿ ಎದುರೆ ನೇಣಿಗೆ ಶರಣಾದ ಮನೆ ಮಾಲೀಕನ ಪತ್ನಿ
ಬ್ಯಾಂಕ್ ಗಳಿಗೆ ವಂಚನೆ – ಉದ್ಯಮಿ ಬಿ.ಆರ್ ಶೆಟ್ಟಿಯ ಪ್ರಪಂಚಾದ್ಯಂತ ಇರುವ ಆಸ್ತಿಗಳ ಮುಟ್ಟುಗೋಲಿಗೆ ಲಂಡನ್ ಕೋರ್ಟ್ ಸೂಚನೆ
ಮರ್ಮಾಂಗದ ಫೋಟೋ ಕಳಿಸದಿದ್ರೆ ಕೈ ಕೊಯ್ದುಕೊಳ್ತೀನಿ: ಕಾಮುಕನಿಗೆ ಹೆದರಿ ಎಡವಟ್ಟು!
ನವದೆಹಲಿಯ ಮುಖ್ಯಮಂತ್ರಿ ಮಗಳಿಗೇ ಪಂಗನಾಮ!
ಡೇರ್ ಚಾಲೆಂಜ್ ಗಾಗಿ ಲೈವ್ನಲ್ಲಿ ಬೆತ್ತಲಾದ 14ರ ಬಾಲಕಿ: ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ಕಾದಿತ್ತು ಬಿಗ್ ಶಾಕ್!
You must be logged in to post a comment Login