Connect with us

MANGALORE

ಮಂಗಳೂರು ಮಹಾನಗರ ಪಾಲಿಕೆ ಕಾರ್ಪೋರೇಟರ್ ಗೂ ಕೊರೋನಾ

ಮಂಗಳೂರು ಜುಲೈ 08: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಈಗ ಸಮುದಾಯ ಹಂತಕ್ಕೆ ತಲುಪಿದ್ದು, ಜಿಲ್ಲೆಯಲ್ಲಿ ಹಲವಾರು ಜನಪ್ರತಿನಿಧಿಗಳಿಗೂ ಈಗ ಕೊರೊನಾ ಸೊಂಕು ತಗುಲಿದೆ. ಇತ್ತೀಚೆಗೆ ಶಾಸಕ ಭರತ್ ಶೆಟ್ಟಿಗೆ ಕೊರೊನಾ ಸೊಂಕು ತಗುಲಿರುವ ನಡುವೆ ಮಂಗಳೂರು ಪಾಲಿಕೆ ಕುಂಜತ್ತಬೈಲ್ ದಕ್ಷಿಣ 15ನೇ ವಾರ್ಡ್ ಸದಸ್ಯೆ ಸುಮಂಗಲಾ ರಾವ್ ಅವರಿಗೆ ಕೊರೊನಾ ಸೊಂಕು ತಗುಲಿದೆ.


ಈ ಕುರಿತಂತೆ ಸಾಮಾಜಿಕ ತಾಣದಲ್ಲಿ ಕಾರ್ಪೋರೇಟರ್ ಸುಮಂಗಲಾ ರಾವ್ ಸ್ವತಃ ಮಾಹಿತಿ ನೀಡಿದ್ದಾರೆ.  ಪಾಲಿಕೆ ಸದಸ್ಯೆ ಕೆಲ ದಿನಗಳ ಹಿಂದೆ ಕುಂಜತ್ತಬೈಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಸಭೆಯಲ್ಲಿ ಭಾಗಿಯಾಗಿದ್ದು, ಈ ಸಭೆಯಲ್ಲಿ ಭಾಗವಹಿಸಿದ ಒಬ್ಬರಲ್ಲಿ ಕೊರೊನಾ ದೃಢಪಟ್ಟಿತ್ತು. ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅವರು ತಾವೇ ಕ್ವಾರೆಂಟೈನ್ ಗೆ ಒಳಗಾಗಿದ್ದರು. ಆದರೆ ಇಂದು ಬಂದ ವರದಿಯಲ್ಲಿ ಪಾಲಿಕೆ ಸದಸ್ಯೆಗೆ ಕೊರೊನಾ ಪಾಸಿಟಿವ್ ಆಗಿರುವುದು ದೃಢವಾಗಿದೆ

Facebook Comments

comments