Connect with us

    LATEST NEWS

    ಫೈಜರ್ ಕೊರೊನಾ‌ ಲಸಿಕೆ ಪಡೆದುಕೊಂಡ 4 ಮಂದಿಗೆ ಪಾರ್ಶ್ವವಾಯು

    ಹೊಸದಿಲ್ಲಿ: ಕೊರೊನಾ ಲಸಿಕೆಯ ಭರವಸೆಯಲ್ಲಿರುವ ವಿಶ್ವಕ್ಕೆ ಈಗ ಮತ್ತೊಂದು ಶಾಕಿಂಗ್ ಸುದ್ದಿ ಬಂದಿದ್ದು, ಅಮೆರಿಕದ ದೈತ್ಯ ಔಷಧ ತಯಾರಿಕಾ ಕಂಪನಿ ಫೈಜರ್‌ ತಯಾರಿಸಿದ ವಿಶ್ವದ ಮೊದಲ ಕೊರೊನಾ ಲಸಿಕೆ ಪಡೆದ ನಾಲ್ಕು ಜನರಲ್ಲಿ ತಾತ್ಕಾಲಿಕ ರೀತಿಯಲ್ಲಿ ಪಾರ್ಶ್ವವಾಯು ಉಂಟಾಗಿದೆ ಎಂದು ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಕ ಆಡಳಿತ ಮಂಡಳಿ ತನ್ನ ವರದಿಯಲ್ಲಿ ತಿಳಿಸಿದೆ.


    ಎಫ್‌ಡಿಎ ಈ ವರದಿಯಿಂದ ಸದ್ಯ ಜಗತ್ತಿನಾದ್ಯಂತ ಭಾರೀ ಭರವಸೆ ಮೂಡಿಸಿದ್ದ ಫೈಜರ್‌ ಕೊರೊನಾ ಲಸಿಕೆ ಮೇಲಿನ ಭರವಸೆ ಕಡಿಮೆಯಾಗಿದೆ. ಈಗಾಗಲೇ ಲಂಡನ್ ನಲ್ಲಿ ಈ ಲಸಿಕೆಯನ್ನು ಸಾರ್ವಜನಿಕವಾಗಿ ನೀಡಲು ಆರಂಭಿಸಲಾಗಿದ್ದು, ಎಫ್ ಡಿಎ ವರದಿ ಆತಂಕಕ್ಕೀಡು ಮಾಡಿದೆ. ಆದರೆ ವೈದ್ಯರ ಪ್ರಕಾರ ತಾತ್ಕಾಲಿಕ ರೀತಿಯ ಮುಖ ಪಾರ್ಶ್ವವಾಯು ಉಂಟಾಗಿರುವುದಕ್ಕೆ ಸಂಬಂಧಪಟ್ಟಂತೆ ಯಾವುದೇ ಸ್ಪಷ್ಟ ಮಾರ್ಗಗಗಳು ಕಾಣುತ್ತಿಲ್ಲ. ಆದರೂ ವೈದ್ಯರುಗಳು ಆತಂಕಕಾರಿ ಅಡ್ಡಪರಿಣಾಮದ ಬಗ್ಗೆ ಗಮನವಹಿಸಬೇಕು. ಅಲ್ಲದೇ ಮುಂದಿನ ದಿನಗಳಲ್ಲಿ ಲಸಿಕೆ ಪಡೆದವರಿಗೆ ಯಾವ ರೀತಿಯ ಪರಿಣಾಮ ಬೀರುತ್ತೆ ಎನ್ನುವು ಬಗ್ಗೆಯೂ ನಿಗಾ ವಹಿಸಬೇಕೆಂದು ಎಫ್‌ಡಿಎ ಸಂಸ್ಥೆಗೆ ಎಚ್ಚರಿಸಿದೆ.


    ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಫೈಜರ್‌ ಸಂಸ್ಥೆಯ ಸಿಇಒ ಅಲ್ಬರ್ಟ್‌ ಬೌರ್ಲಾ, ಕೊರೊನಾ ಲಸಿಕೆಯನ್ನು ಇತರೆ ಲಸಿಕೆಯಂತೆ ಸಂಪೂರ್ಣ ನಿಗಾ ವಹಿಸಿ ಪರೀಕ್ಷೆ ನಡೆಸಿದ್ದೇವೆ, ಅಲ್ಲದೇ ಸೂಕ್ಷ್ಮ ಸಂಶೋಧನೆ ಹಾಗೂ ಪರಿಶೀಲನೆ ಮೂಲಕ ಎಲ್ಲಾ ಉನ್ನತ ಮಾನದಂಡಗಳನ್ನು ಪ್ರಯೋಗಿಸಿ ಲಸಿಕೆ ವಾಸ್ತವವಾಗಿ ಪರೀಕ್ಷಿಸಲಾಯಿತು ಎಂದು ಸ್ಪಷ್ಟನೆ ನೀಡಿದರು. ಯಾವಾಗಲೂ ಲಸಿಕೆಗಳ ಬಗ್ಗೆ ಸಂಶಯ ಹೊಂದುವ ಜನರಿದ್ದಾರೆ, ಆದರೆ ಅವರು ತಪ್ಪು ಎಂದು ನಾನು ಹೇಳಬೇಕಾಗಿದೆ ಎಂದು ಅಲ್ಬರ್ಟ್‌ ಅಸಮಾಧಾನ ವ್ಯಕ್ತಪಡಿಸಿದರು.

    ಇನ್ನು ನಾಲ್ಕು ಮಂದಿಗೆ ತಾತ್ಕಾಲಿಕ ಪಾಶ್ವವಾಯು ಎಂದರು ಕೂಡ ಎಫ್‌ಡಿಎ ಬಿಡುಗಡೆಗೊಳಿಸಿದ ದಾಖಲೆಗಳು ಫೈಜರ್‌ ಕೊರೊನಾ ಲಸಿಕೆ ಅತ್ಯಂತ ಸುರಕ್ಷಿತವಾಗಿದೆ ಹಾಗೂ ಕೊರೊನಾ ವಿರುದ್ಧ ಹೋರಾಡಲು ಸಹಾಯಕವಾಗಿದೆ ಎಂದು ತಿಳಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply