Connect with us

    LATEST NEWS

    ಆನ್ ಲೈನ್ ಕ್ಲಾಸ್ ವೇಳೆ ಗೆಳೆಯನ ಲೈಂಗಿಕತೆ ಬಗ್ಗೆ ಗಾಸಿಫ್ ಮಾತನಾಡಿ ವೈರಲ್ ಆದ ಶ್ವೇತಾ…..!!

    ಟ್ವೀಟರ್ ನಲ್ಲಿ ನಿನ್ನೆ ಒಂದು ಹ್ಯಾಶ್ ಟ್ಯಾಗ್ ಎಲ್ವರನ್ನ ಚಕಿತಗೊಳಿಸಿತ್ತು. ಪೆಟ್ರೋಲ್ ಬೆಲೆ, ರೈತ ಪ್ರತಿಭಟನೆ ಸೇರಿದಂತೆ ವಿವಿಧ ಗಂಭೀ ವಿಚಾರಗಳು ಟ್ರೆಂಡ್ ಆಗುತ್ತಿದ್ದ ಸಂದರ್ಭ ಶ್ವೇತಾ ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿತ್ತು.


    ಶ್ವೇತಾ ಎಂಬ ಹ್ಯಾಶ್​ಟ್ಯಾಗ್​ ಇದ್ದಕ್ಕಿದ್ದ ಹಾಗೆ ವೈರಲ್​ ಆಗೋಕೆ ಕಾರಣ ಒಂದು ವಿಡಿಯೋ. ಆನ್​ಲೈನ್​ ಕ್ಲಾಸ್​ ವೇಳೆ ಮೈಕ್​ ಆನ್​ ಇದೆ ಎಂಬುದನ್ನ ಅರಿಯದೇ ಶ್ವೇತಾ ವೈಯಕ್ತಿಕ ವಿಚಾರಗಳನ್ನ ಮಾತನಾಡಿದ್ದು ಈ ವಿಡಿಯೋ ಸಖತ್​ ವೈರಲ್​ ಆಗಿದೆ.


    ಆನ್​ಲೈನ್​ ಕ್ಲಾಸ್​​ ವೇಳೆ ಮೈಕ್​ ಆನ್ ಮಾಡಿಕೊಂಡಿದ್ದ ಶ್ವೇತಾ ತನ್ನ ಗೆಳೆಯನ ಪ್ರೇಯಸಿಗೆ ಲೈಂಗಿಕ ಕ್ರಿಯೆ ಮೇಲೆ ಆಸಕ್ತಿ ಜಾಸ್ತಿ ಎಂಬ ವಿಚಾರವಾಗಿ ಮಾತನಾಡುತ್ತಲೇ ಹೋಗಿದ್ದಾಳೆ. ಆಕೆಗೆ ಎಲ್ಲರೂ ಮೈಕ್​ ಆಫ್​ ಮಾಡಿಕೊಳ್ಳುವಂತೆ ಹೇಳಿದ್ದರೂ ಸಹ ಇದರ ಅರಿವೇ ಇಲ್ಲದೇ ಶ್ವೇತಾ ಗೆಳೆಯನ ಪ್ರೇಯಸಿಯ ಬಗ್ಗೆ ಇಡೀ ತರಗತಿಗೆ ಕೇಳುವಂತೆ ಮಾತನಾಡಿದ್ದಾಳೆ.

    ಮೈಕ್​ ಆನ್​ ಆಗಿದ್ದರ ಬಗ್ಗೆ ಪರಿವೇ ಇಲ್ಲದ ಶ್ವೇತಾ, ಹೇಗೆ ತನ್ನ ಗೆಳೆಯ ಸೆಕ್ಸ್​ ಮೇಲೆ ಆಸಕ್ತಿ ಹೊಂದಿರುವ ಪ್ರೇಯಸಿಯನ್ನ ಹೊಂದಿದ್ದಾನೆ. ಹಾಗೂ ಅವರಿಬ್ಬರ ನಡುವೆ ದೈಹಿಕ ಸಂಪರ್ಕ ಇದೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಮಾತನಾಡುತ್ತಲೇ ಹೋಗಿದ್ದಾಳೆ.
    ಇದು ಟ್ವೀಟರ್ ನಲ್ಲಿ ಟ್ರೆಂಡ್ ಆಗಿ ವಿವಿಧ ರೀತಿಯ ಟ್ರೋಲ್ ಗಳು ಹುಟ್ಟಿಕೊಂಡಿದ್ದವು, ಒಟ್ಟಾರೆ ಆನ್ ಲೈನ್ ಕ್ಲಾಸ್ ಗಳ ತಮಾಷೆಗಳ ಸಾಲಿಗೆ ಈ ವಿಡಿಯೋ ಒಂದು ಸೇರಿದೆ.

    Share Information
    Advertisement
    Click to comment

    You must be logged in to post a comment Login

    Leave a Reply