Connect with us

    LATEST NEWS

    ಭಗವತಿ ತೈಯ್ಯಂ ಮಡಿಲಲ್ಲಿ ಬೆಚ್ಚಗೆ ಕುಳಿತ ಮಗು..ಮಗುವಿನ ಮುಗ್ದತೆಗೆ ಮಾರು ಹೋದ ಜನ

    ಮಂಗಳೂರು : ಕರಾವಳಿಯಲ್ಲಿ ದೈವದ ಮಡಿಲಲ್ಲಿ ಹೆಣ್ಣುಮಗುವೊಂದು ಬೆಚ್ಚಗೆ ಕುಳಿತುಕೊಂಡಿರುವ ಪೋಟೋ ಒಂದು ವೈರಲ್ ಆಗಿದೆ. ಸಾಮಾಜಿಕ ಜಾಲತಾಣ ಸೇರಿದಂತೆ ವಾಟ್ಸಪ್ ಸ್ಟೇಟಸ್‍ಗೆ ಹಾಕಿ ಸಂಭ್ರಮಿಸುತ್ತಿದ್ದಾರೆ.


    ಕಣ್ಣೂರು ಜಿಲ್ಲೆಯ ಅಂಜಾರಕ್ಕಂಡಿಯಲ್ಲಿ ಈ ಅಪರೂಪದ ದೃಶ್ಯ ಸೆರೆಯಾಗಿದೆ. ಪೋಟೋಗ್ರಾಫರ್ ಅಭಿಜಿತ್ ಕಾನುಮಾರತ್ತ ಅವರ ಕ್ಯಾಮರಾದಲ್ಲಿ ಸೆರೆಯಾದ ಈ ದೃಶ್ಯ ಸೆರೆಯಾಗಿದ್ದು, ಭಗವತಿ ತೈಯ್ಯಂ ಮಡಿಲಲ್ಲಿ ಸ್ವಲ್ಪವೂ ಅಂಜಿಕೆಯಿಲ್ಲದೆ ಹೆಣ್ಣು ಮಗು ಕುಳಿತಿರುವುದು ನೆರೆದವರ ಹುಬ್ಬೇರಿಸುವಂತೆ ಮಾಡಿದೆ.


    ದೈವ ಮಗುವನ್ನು ಕರೆಯುತ್ತಿದ್ದಂತೆಯೇ ಅದರ ಬಳಿಗೆ ಹೋಗುತ್ತಾಳೆ. ಅಲ್ಲದೆ ದೈವ ಎತ್ತಿಕೊಳ್ಳಲೆಂದು ಕೈ ಮುಂದೆ ಮಾಡಿದಾಗ ಹೆಣ್ಣು ಮಗು ಯಾವುದೇ ಅಂಜಿಕೆ-ಅಳುಕು ಇಲ್ಲದೆ ಕೈ ಮುಂದೆ ಮಾಡಿ ಎತ್ತಿಕೊಳ್ಳುವಂತೆ ಸೂಚನೆ ನೀಡುತ್ತಾಳೆ. ಈ ವೇಳೆ ದೈವ ಆಕೆಯನ್ನು ಎತ್ತಿಕೊಂಡು ತನ್ನ ಮಡಿಲಲ್ಲಿ ಕುಳ್ಳಿರಿಸುತ್ತದೆ. ಬಳಿಕ ತಲೆ ಸವರಿ ಬಿಗಿಯಾಗಿ ಅಪ್ಪಿಕೊಳ್ಳುತ್ತದೆ. ಅಂತೆಯೇ ಮಗು ಕೂಡ ದೈವದ ಎದೆಯಲ್ಲಿ ತಲೆಯಿಟ್ಟು ತನ್ನ ಮುಗ್ಧತೆ ಮೆರೆದಿದೆ.


    ಈ ಚಿತ್ರ ಸಣ್ಣ ಮಗು ದೈವದ ಮಡಿಲಲ್ಲಿ ದೈವದ ಅಭಯದೊಂದಿಗೆ ಕುಳಿತಿದ್ದು, ದೈವದ ಮುಖದಲ್ಲಿ ಇರುವ ಸಾಂತ್ವನದ ಭಾವವನ್ನು ಕೂಡ ಇಲ್ಲಿ ನಾವು ಗಮನಿಸಬಹುದು. ಮಗುವಿನ ಮುಖದಲ್ಲಿರುವ ಆ ಮುಗ್ಧತೆ, ನಿರ್ಲಿಪ್ತತೆ, ಬೆಚ್ಚನೆಯ ಭದ್ರತೆಯ ಭಾವನೆ ಪುಟ್ಟ ಕಂದಮ್ಮನ ಕಣ್ಣಲ್ಲಿ ಕಾಣಿಸುತ್ತಿದೆ. ದೈವವನ್ನು ಎರಡು ಪುಟ್ಟ ತೋಳುಗಳಿಂದ ತನ್ನೆಡೆಗೆ ಸೆಳೆದು ದೈವ ವೇಷಧಾರಿಯ ಜೊತೆ ಹೆಜ್ಜೆ ಹಾಕುತ್ತಿರಬೇಕಾದರೆ ಕಾಣಿಸುವ ದೃಶ್ಯ ನೋಡುಗರ ಮನಸೂರೆಗೊಳ್ಳುವುದಂತೂ ಸುಳ್ಳಲ್ಲ.

    Share Information
    Advertisement
    Click to comment

    You must be logged in to post a comment Login

    Leave a Reply