LATEST NEWS
ONGC ಹೆಲಿಕಾಪ್ಟರ್ ಪತನ: ಪೈಲಟ್ ಸೇರಿ ಏಳು ಮಂದಿ ನಾಪತ್ತೆ
ONGC ಹೆಲಿಕಾಪ್ಟರ್ ಪತನ: ಪೈಲಟ್ ಸೇರಿ ಏಳು ಮಂದಿ ನಾಪತ್ತೆ
ಮುಂಬೈ,ಜನವರಿ 13: ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ONGC) ಐವರು ಉದ್ಯೋಗಿಗಳು ಮತ್ತು ಇಬ್ಬರು ಪೈಲಟ್‌ಗಳನ್ನೊಳಗೊಂಡ ಹೆಲಿಕಾಪ್ಟರ್ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ನಿಮಿಷಗಳಲ್ಲಿ ಅರಬ್ಬಿ ಸಮುದ್ರದಲ್ಲಿ ಪತನಗೊಂಡಿದೆ.
ಇಂದು ಬೆಳಿಗ್ಗೆ 10.20ಕ್ಕೆ ವಿಲೇ ಪಾರ್ಲೆ ಜುಹೂ ವಿಮಾನ ನಿಲ್ದಾಣದಿಂದ ಹೊರಟ ಪವನ್ ಹಂಸ್ ಹೆಲಿಕಾಪ್ಟರ್ 11.00 ಕ್ಕೆ ಒಎನ್‌ಜಿಸಿಯ ನಾರ್ತ್ ಫೀಲ್ಡ್‌ನಲ್ಲಿ ಇಳಿಯಬೇಕಿತ್ತು. ಆದರೆ, 10.35ರ ವೇಳೆಗೆ ಹೆಲಿಕಾಪ್ಟರ್ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಸಂಪರ್ಕ ಕಡಿದುಕೊಂಡಿದೆ.
ಪತನದ ವೇಳೆ ಹೆಲಿಕಾಪ್ಟರ್ ಮುಂಬೈನಿಂದ 30 ನಾಟಿಕಲ್ ಮೈಲಿ ದೂರದಲ್ಲಿ ಅರಬ್ಬೀ ಸಮುದ್ರದ ಮೇಲೆ ಸಂಚರಿಸುತ್ತಿತ್ತು.
ಕರಾವಳಿ ಕವಾಲು ಪಡೆ, ಭಾರತೀಯ ನೌಕ ದಳ, ಸೇನಾ ಪಡೆಯ ವಿಮಾನಗಳು ನಾಪತ್ತೆಯಾದ ಹೆಲಿಕಾಪ್ಟರ್ ಮತ್ತು ಸಿಬಂದಿಗಳು ಶೋಧ ಕಾರ್ಯದಲ್ಲಿ ತೊಡಗಿದೆ. ನಾಲ್ಕು ಮೃತ ದೇಹಗಳು ಮತ್ತು ಹೆಲಿಕಾಪ್ಟರ್ ಅವಶೇಷಗಳು ದೊರಕಿವೆ ಎಂದು ಕರಾವಳಿ ರಕ್ಷಣಾಪಡೆ ತಿಳಿಸಿದೆ. ಉಳಿದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.