ಔಷಧಕ್ಕಾಗಿ 15 ಕಿಲೋ ಮೀಟರ್ ನಡೆದ ವಯೋವೃದ್ದೆ

ಸುಳ್ಯ ಎಪ್ರಿಲ್ 10: ಲಾಕ್ ಡೌನ್ ಹಿನ್ನೆಲೆಯಲ್ಲಿ ವಾಹನ ಸಿಗದೇ ವೃದ್ದೆಯೋರ್ವರು ಔಷಧಿ ಖರೀದಿಸಲು ಸುಳ್ಯದ ಕೊಲ್ಲಮೊಗ್ರದಿಂದ ಸುಮಾರು 15 ಕಿಮೀ ದೂರದ ಗುತ್ತಿಗಾರಿಗೆ ನಡೆದುಕೊಂಡೇ ಬಂದ ಘಟನೆ ನಡೆದಿದೆ.

ಗುತ್ತಿಗಾರಿಗೆ ಆಗಮಿಸಿದಾಗ ತುಂಬಾ ಸುಸ್ತಾದ ಅಜ್ಜಿಯನ್ನು ಗಮನಿಸಿದ ಸಾರ್ವಜನಿಕರು ವಿಚಾರಿಸಿದಾಗ ತಾನು ಮನೆಯಿಂದ ಔಷಧಿ ಖರೀದಿಗೆ ನಡೆದುಕೊಂಡು ಬಂದ ವಿಚಾರ ತಿಳಿಸಿದ್ದಾರೆ. ತಕ್ಷಣವೇ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಚ್ಚುತ್ತ ಗುತ್ತಿಗಾರು,ಪಿಡಿಓ ಶ್ಯಾಮಪ್ರಸಾದ್, ಸ್ಥಳೀಯ ಪೋಲೀಸರ ನೆರವಿನೊಂದಿಗೆ ಔಷಧೀಯ ವ್ಯವಸ್ಥೆ ಮಾಡಿಖಾಸಗಿ ವಾಹನದಲ್ಲಿ ಮನೆಗೆ ತಲುಪಿಸಿದ್ದಾರೆ.